(ನ್ಯೂಸ್ ಕಡಬ)newskadaba.com ಬಂಟ್ವಾಳ, ಜು.24. ಕಳೆದ ಐದು ದಿನದಿಂದ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಮಾಣಿಮಜಲು ಗ್ರಾಮದಿಂದ ಯುವಕನೊಬ್ಬ ಕಾಣೆಯಾಗಿದ್ದಾನೆ ಎಂದು ವರದಿಯಾಗಿದ್ದು, ನಾಪತ್ತೆಯಾದ ಯುವಕನನ್ನು ಸಮದ್ ಎಂದು ಗುರುತಿಸಲಾಗಿದೆ. ಸಮದ್ ಮೂರು ಮಕ್ಕಳ ತಂದೆಯಾಗಿದ್ದು, ಆತ ಎಲ್ಲಿಯಾದರೂ ಕಂಡು ಬಂದಲ್ಲಿ ತಕ್ಷಣ ಬಂಟ್ವಾಳ ಟೌನ್ ಪೋಲಿಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಥವಾ +91 90082 18612, +91 9901090586 ನಂಬರಿಗೆ ತಿಳಿಸಬೇಕಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
