ಉಡುಪಿ: ವಾರಿಸುದಾರರಿಲ್ಲದ ಶವ ಸಂಸ್ಕಾರ 

(ನ್ಯೂಸ್ ಕಡಬ)newskadaba.com ಉಡುಪಿ, ಜು.24. 4 ವರ್ಷಗಳಿಂದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದ ವೃದ್ಧರು ನಿಧನ ಹೊಂದಿದ್ದು, ಸಂಬಂಧಿಕರ ಪತ್ತೆಯಾಗದೆ ಇರುವುದರಿಂದ ವಿಶು ಶೆಟ್ಟಿಯವರು ವೃದ್ಧರ ಶವ ಸಂಸ್ಕಾರವನ್ನು ಬೀಡಿನ ಗುಡ್ಡೆ ರುದ್ರ ಭೂಮಿಯಲ್ಲಿ ನೆರವೇರಿಸಿದರು ಎನ್ನಲಾಗಿದೆ.

ಮೃತರನ್ನು ವೃದ್ಧ ನಾಗಪ್ಪ ನಾಡಾರ್(85) ಎಂದು ಗುರುತಿಸಲಾಗಿದೆ. ಸಂಬಂಧಿಕರ ಪತ್ತೆಗೆ ಮಾಧ್ಯಮ ಪ್ರಕಟಣೆ ನೀಡಿದರೂ ಸಂಬಂಧಿಕರು ಪತ್ತೆ ಆಗಲಿಲ್ಲ. ಶವ ಸಂಸ್ಕಾರದಲ್ಲಿ ಆಶ್ರಮದ ಮುಖ್ಯಸ್ಥರಾದ ಶ್ರೀಮತಿ ತನುಲ ಹಾಗೂ ಆಶ್ರಮ ವಾಸಿಗಳು ಸಹಕರಿಸಿದರು. ಅಂಬಲಪಾಡಿ ಕೃಷ್ಣ ರವರು ಜೆ ಸಿ ಬಿ ನೀಡಿ ಸಹಕರಿಸಿದರು. ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

Also Read  ಬಂಟ್ವಾಳ: ವಿದ್ಯುತ್ ತಂತಿ ತುಳಿದು ತಂದೆ, ಮಗಳು ಸ್ಥಳದಲ್ಲೇ ಮೃತ್ಯು ➤ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದ ವೇಳೆ ದುರ್ಘಟನೆ

error: Content is protected !!
Scroll to Top