ಗೀಸರ್‌ ಗ್ಯಾಸ್‌ ಸೋರಿಕೆ ತಾಯಿ-ಮಗ ದಾರುಣ ಮೃತ್ಯು



(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.23. ಬಾತ್‌ರೂಮ್‌ ಗೆ ಹೋಗಿದ್ದಾಗ ಗೀಸರ್‌ನ ಗ್ಯಾಸ್‌ ಸೋರಿಕೆಯಾಗಿ ಉಸಿರುಗಟ್ಟಿ ತಾಯಿ-ಮಗ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಶೋಭಾ ಮತ್ತು 16 ವರ್ಷದ ದಿಲೀಪ್ ಎಂದು ಗುರುತಿಸಲಾಗಿದೆ. ಸ್ನಾನಕ್ಕೆಂದು ತೆರಳಿದ್ದ ಬಾಲಕ ಮೊದಲು ವಿಷಕಾರಿ ಅನಿಲವನ್ನು ಸೇವಿಸಿ ಕುಸಿದು ಬಿದ್ದಿದ್ದಾನೆ. ಎಷ್ಟೋ ಹೊತ್ತಾದರೂ ಹೊರಗೆ ಬಾರದೇ ಇದ್ದುದರಿಂದ ತಾಯಿ ನೋಡಲು ಹೋಗಿದ್ದಾರೆ. ನಂತರ ಆಕೆಯೂ ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.





ಗಾಳಿಯಾಡಲು ಸ್ಥಳಾವಕಾಶವಿಲ್ಲದ ಕಾರಣ ವಿಷಕಾರಿ ಅನಿಲವನ್ನು ಸೇವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತನ್ನ ಮಗನ ಸ್ಥಿತಿಯನ್ನು ನೋಡಿದಾಗ, ಅವನ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.






error: Content is protected !!
Scroll to Top