ಶಿರೂರು ಗುಡ್ಡ ಕುಸಿತ ಪ್ರಕರಣ..!    ಓರ್ವ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಶಿರೂರು, ಜು.23. ಅಂಕೋಲಾ ಶಿರೂರು ಗುಡ್ಡ ಕುಸಿತದ ಪ್ರಕರಣದಲ್ಲಿ ಮುಂಜಾನೆ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಇನ್ನೊಂದು ಮಹಿಳೆಯ‌ ಮೃತದೇಹ ಪತ್ತೆಯಾಗಿದ್ದು ಹೀಗಾಗಿ ಒಟ್ಟು ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾದಂತಾಗಿದೆ ಎಂದು ವರದಿ ತಿಳಿಸಿದೆ.

ಶಿರೂರು ಪ್ರಕರಣದಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ 5 ಮಂದಿ, ಒಬ್ಬ ಮಹಿಳೆ ಹಾಗೂ ಮೂವರು ಟ್ಯಾಂಕರ್ ಚಾಲಕರು ಹಾಗೂ ಟಿಂಬರ್ ಲಾರಿ ಚಾಲಕ ನಾಪತ್ತೆ ಆಗಿರುವ ಬಗ್ಗೆ ದೂರುಗಳು ಬಂದಿತ್ತು ಎನ್ನಲಾಗಿದೆ. ಗಂಗಾವಳಿ ನದಿ ತೀರದ ಮಹಿಳೆಯ ಮೃತದೇಹ ಆಗಿರಬಹುದು ಎಂದು ಅನುಮಾನವಿದ್ದು, ಆಕೆಯದ್ದೇ ಎಂಬುದನ್ನು ಕುಟುಂಬದವರು ಪತ್ತೆ ಮಾಡಬೇಕಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ದಸರಾ ವಿಶೇಷ: ಕರ್ನಾಟಕ ಶೈಲಿಯ ಜೋಳದ ತಾಲಿಪಟ್ಟು

 

error: Content is protected !!
Scroll to Top