ಯುದ್ಧ ನೌಕೆಯಲ್ಲಿ ಅಗ್ನಿ ಅವಘಡ..!       ನಾವಿಕನೋರ್ವ ನಾಪತ್ತೆ

(ನ್ಯೂಸ್ ಕಡಬ)newskadaba.com  ಮುಂಬೈ, ಜು.23. ಭಾರತೀಯ ನೌಕಾಪಡೆಯ ಯುದ್ಧ ನೌಕೆ ಐಎನ್‌ಎಸ್ ಬ್ರಹ್ಮಪುತ್ರದಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ ಎನ್ನಲಾಗಿದೆ. ನೌಕೆಯ ಕಿರಿಯ ನಾವಿಕ ನಾಪತ್ತೆಯಾಗಿ, ನೌಕೆಯು ಒಂದು ಕಡೆ ವಾಲಿರುವ ಘಟನೆ ಮುಂಬೈನ ನೌಕಾಪಡೆಯ ಡಾಕ್‌ ಯಾರ್ಡ್‌ ನಲ್ಲಿ ನಡೆದಿದೆ.

ಅವಘಡದಲ್ಲಿ ಸಾಕಷ್ಟು ಹಾನಿಯುಂಟಾಗಿದ್ದು, ಹಡಗನ್ನು ಸರಿಪಡಿಸುವ ಕಾರ್ಯಾಚರಣೆ ನಡೆಯುತ್ತಿದೆ. ಜೊತೆಗೆ ನಾಪತ್ತೆಯಾಗಿರುವ ಸಿಬ್ಬಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಐಎನ್‌ಎಸ್ ಬ್ರಹ್ಮಪುತ್ರ ಯುದ್ಧನೌಕೆಯ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಇತರ ಹಡಗುಗಳ ಸಿಬ್ಬಂದಿ ನೆರವಿನಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ದುರಂತದಿಂದ ನೌಕೆ ಒಂದು ಕಡೆ ವಾಲಿದ್ದು, ಹಡಗನ್ನು ನೇರವಾಗಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ನೌಕಾಪಡೆ ತಿಳಿಸಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ಕೌಟುಂಬಿಕ ಕಲಹ- ಪೊಲೀಸ್ ಪೇದೆ ದಂಪತಿಗಳಿಂದ ಆತ್ಮಹತ್ಯೆಗೆ ಯತ್ನ...! ➤ ಪತ್ನಿ ಮೃತ್ಯು, ಪತಿ ಪಾರು

 

 

error: Content is protected !!
Scroll to Top