ರಾಹುಲ್‌ ಗಾಂಧಿ ಬಗ್ಗೆ ಅಪಪ್ರಚಾರ..!   ಪೊಳಲಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ರಮಾನಾಥ ರೈ

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಜು.23. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆಯ ವಿಚಾರವಾಗಿ ಸುಳ್ಳು ಅಪಪ್ರಚಾರ ಮಾಡುವವರಿಗೆ ದೇವರು ಸರಿಯಾದ ಉತ್ತರವನ್ನು ಕೊಡುತ್ತಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಇಂದು ಬೆಳಿಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಕುರಿತು ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಚಿವರು, ಬಳಿಕ  ಮಾಧ್ಯಮದವರ ಜೊತೆ ಮಾತನಾಡಿ, ಕೆಲ ದಿನಗಳ ಹಿಂದೆ ಹಿಂದೂ ಸಂಘಟನೆಯ ಪ್ರಮುಖರು ಪೊಳಲಿ ದೇವಸ್ಥಾನದಲ್ಲಿ ರಾಹುಲ್ ಗಾಂಧಿ  ವಿರುದ್ಧ ಹೇಳಿಕೆಯ ಬಗ್ಗೆ ಉಲ್ಲೇಖಿಸಿದ ಅವರು, ಸುಳ್ಳು ಹಾಗೂ ಅಪಪ್ರಚಾರಕ್ಕೆ ದೇವರು ತಕ್ಕ ಉತ್ತರ ನೀಡುತ್ತಾನೆ,  ಸತ್ಯಕ್ಕೆ ಎಂದೆಂದಿಗೂ ಜಯ ಸಿಗಲಿದೆ ಎಂದರು.

ಕೆಲವರಿಂದ ನಾಯಕರ ವಿರುದ್ದ ಸುಳ್ಳು ಪ್ರಚಾರ ಮಾಡಲಾಗುತ್ತಿರುವುದು ಕಂಡು ಬಂದಿದ್ದು, ಧಾರ್ಮಿಕ ನೆಲೆಗಟ್ಟಿನ ಅಡಿಯಲ್ಲಿ ಸತ್ಯಮೇವ ಜಯತೇ ಎಂಬ ದೃಷ್ಟಿಯಿಂದ ಸತ್ಯವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ದೇವಸ್ಥಾನದ ಸ್ಥಳದಲ್ಲಿ ನಿಂತು ನಾನು ಈ ಹೇಳಿಕೆ ನೀಡುತ್ತಿದ್ದೇನೆ ಎಂದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ನಿಯೋಜಿತ ಅಧ್ಯಕ್ಷರುಗಳಾದ ಚಂದ್ರಶೇಖರ ಭಂಡಾರಿ ಅಮ್ಮುಂಜೆ , ಬಾಲಕೃಷ್ಣ ಅಂಚನ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಪದ್ಮಶೇಖರ್ ಜೈನ್, ತಾ.ಪಂ.ಸದಸ್ಯರಾದ ಮಲ್ಲಿಕಾ ಶೆಟ್ಟಿ, ಶಿವಪ್ರಸಾದ್ ಕಳ್ಳಿಗೆ, ಪ್ರಮುಖರಾದ ಜಯಂತಿ ಪೂಜಾರಿ, ಸುದರ್ಶನ ಜೈನ್, ಮಾಯಿಲಪ್ಪ ಸಾಲ್ಯಾನ್,ಚಿತ್ತರಂಜನ್ ಶೆಟ್ಟಿ, ಜನಾರ್ಧನ ಚೆಂಡ್ತಿಮಾರ್,  ಮಧುಸೂದನ್‌ ಶೆಣೈ, ಚಂದ್ರಹಾಸ ಪಲ್ಲಿಪಾಡಿ, ಸುರೇಶ್ ನಾವೂರ, ಸಂಪತ್ ಕುಮಾರ್ ಶೆಟ್ಟಿ ಹಾಗೂ ಇತರ ಹಲವು ಪ್ರಮುಖರು ಹಾಜರಿದ್ದರು ಎನ್ನಲಾಗಿದೆ.

Also Read  ಹಳ್ಳಕ್ಕೆ ಕೆಮಿಕಲ್ ಮಿಶ್ರಿತ ನೀರು ಬಿಡಲು ಯತ್ನ - ಟ್ಯಾಂಕರ್ ಸಮೇತ ಆರೋಪಿ ಪೊಲೀಸ್ ಬಲೆಗೆ

 

 

error: Content is protected !!
Scroll to Top