ಮಂಗಳೂರು: ರೈಲಿನ ಬೋಗಿಯೊಳಗೆ ನೀರು  ಪ್ರಯಾಣಿಕರ ಪರದಾಟ….!

(ನ್ಯೂಸ್ ಕಡಬ)newskadaba.com ಮಂಗಳೂರು, ಜು.22. ರೈಲಿನ ಎಸಿ ಬೋಗಿಯೊಳಗೆ ನೀರು ಹರಡಿದ ಘಟನೆ ಮಂಗಳೂರು – ಮನ್ಮಾಡ್ ಮಂಗಳದ್ವೀಪ ಸೂಪರ್‌ ಫಾಸ್ಟ್ ಎಕ್ಸ್ ಪ್ರೆಸ್‌ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಮಂಗಳೂರಿನಿಂದ ಶಿರಡಿಗೆ ತೆರಳುತ್ತಿದ್ದ 95 ಮಂದಿ ಪ್ರಯಾಣಿಕರಿದ್ದ ಕೋಚ್ ಬಿ6 ಎಸಿ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷದಿಂದ ರೈಲಿನಲ್ಲಿ ಈ ಸಮಸ್ಯೆ ಉಂಟಾಗಿದೆ.

ತಾಂತ್ರಿಕ ದೋಷದಿಂದಾಗಿ ಕೋಚ್‌ ನಲ್ಲಿ ಜಲಪಾತದಂತೆ ನೀರು ಸುರಿದಿದ್ದು, ಪರಿಣಾಮ ರೈಲಿನ ಒಳಭಾಗದಲ್ಲಿ ಪ್ರವಾಹ ಉಂಟಾಗಿದೆ. ನಿರಂತರ ನೀರು ಸೋರಿಕೆಯಿಂದ 60ಕ್ಕೂ ಹೆಚ್ಚು ಪ್ರಯಾಣಿಕರು ರಾತ್ರಿಯಿಡಿ ನಿದ್ದೆಯಿಲ್ಲದೆ ಪರದಾಡಿದ್ದಾರೆ. ಈ ವಿಚಾರವನ್ನು ರೈಲಿನಲ್ಲಿರುವ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

Also Read  ಕೋವಿಡ್‌ ಪ್ರಮಾಣಪತ್ರವಿಲ್ಲದೆ ಕಾಲೇಜುಗಳಿಗೆ ಪ್ರವೇಶವಿಲ್ಲ ➤ ದ.ಕ. ಜಿಲ್ಲಾಡಳಿತ

 

error: Content is protected !!
Scroll to Top