ರಾಜ್ಯದ್ಯಂತ ಹೆಚ್ಚಾದ ಡೆಂಘಿ ಹಾವಳಿ ಮತ್ತೋರ್ವ ಯುವತಿ ಬಲಿ.!



(ನ್ಯೂಸ್ ಕಡಬ)newskadaba.com ಬಳ್ಳಾರಿ, ಜು.20. ರಾಜ್ಯಾದ್ಯಂತ ಡೆಂಘೀ ಹಾವಳಿ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೆ ಇದೆ ಎನ್ನಲಾಗಿದೆ.





ಇದೀಗ, ಮಹಾಮಾರಿ ಡೆಂಗ್ಯೂ ಗೆ ರಾಜ್ಯದಲ್ಲಿ ಮತ್ತೋರ್ವ ಯುವತಿ ಬಲಿಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.






ಮೃತ ಯುವತಿಯನ್ನು ರೇಖಾ (19) ಎಂದು ಗುರುತಿಸಲಾಗಿದ್ದು,  ತೀವ್ರ ಜ್ವರ ಕಾಣಿಸಿಕೊಂಡ ಪರಿಣಾಮ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಯುವತಿಗೆ ಶಂಕಿತ ಡೆಂಗ್ಯೂ ಜ್ವರವಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

 

error: Content is protected !!
Scroll to Top