ಮಂಗಳೂರು: ಗಾಂಜಾ ಸೇವನೆ…! ಆರೋಪಿಗಳು ವಶಕ್ಕೆ



(ನ್ಯೂಸ್ ಕಡಬ) newskadaba.com ಮಂಗಳೂರು, ಜು.20. ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.





ಆರೋಪಿಗಳನ್ನು ಮಂಗಳೂರು ಬಲ್ಮಠದ ಆರ್ಯ ಸಮಾಜ ರಸ್ತೆ, ಸನ್ಯಾಸಿಗುಡ್ಡೆಯ ನಿವಾಸಿ ನೌಫಾಲ್ (38), ಕುಪ್ಪೆಪದವಿನ ಕಿಲೆಂಜಾರು ಗ್ರಾಮದ ನಿವಾಸಿ ಹಂಝು(59) ಹಾಗೂ ಬಂಡಿಹೊಳೆ ಗ್ರಾಮದ ನಿವಾಸಿ ಸುದಾರ್ಶನ್ (25) ಎಂದು ಗುರುತಿಸಲಾಗಿದೆ. ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ಅವರ ತಂಡ ಆರೋಪಿಗಳನ್ನು ಪತ್ತೆಹಚ್ಚಿದ್ದು, ಆರೋಪಿಗಳ ವಿರುದ್ದ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.






error: Content is protected !!
Scroll to Top