ನಾಳೆಯಿಂದ (ಎ.11) ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮೂರು ದಿನಗಳ ಉಚಿತ ಇಸಿಜಿ, ಮಧುಮೇಹ, ಹಿಮೋಗ್ಲೋಬಿನ್, ರಕ್ತದೊತ್ತಡ ತಪಾಸಣಾ ಶಿಬಿರ

ಕಡಬ, ಎ.10. ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಹಾಗೂ ನಾಡೋಳಿ ಡಯಾಗೋಸ್ಟಿಕ್ ಸೆಂಟರ್ ನ ಸಹಯೋಗದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಉಚಿತ ಇಸಿಜಿ, ಮಧುಮೇಹ ತಪಾಸಣೆ, ಹಿಮೋಗ್ಲೋಬಿನ್, ರಕ್ತದೊತ್ತಡ ಪರೀಕ್ಷಾ ಶಿಬಿರ ನಡೆಯಲಿದೆ.

ನಾಳೆಯಿಂದ (ಎ.11) ಎಪ್ರಿಲ್ 13ರ ವರೆಗೆ ನಡೆಯಲಿರುವ ಶಿಬಿರವನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಉದ್ಘಾಟಿಸಲಿದ್ದಾರೆ. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್‌.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ವಿ.ಕೆ. ಪಾಲ್ಗೊಳ್ಳಲಿದ್ದಾರೆ. ಜೇಸಿಐ ಭಾರತ ಸ್ಕಾಲರ್‌ಶಿಪ್ ವಿಭಾಗದ ರಾಷ್ಟ್ರೀಯ ಸಂಯೋಜಕ ಕಾಶೀನಾಥ್ ಗೋಗಟೆ, ಜೇಸಿಐ ಕಡಬ ಕದಂಬದ ಅಧ್ಯಕ್ಷ ಜಾಫಿರ್ ಮಹಮ್ಮದ್ ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯುವಂತೆ ಪ್ರಕಟಣೆ ತಿಳಿಸಿದೆ.

Also Read  ಅರಂತೋಡು: ಸಯ್ಯದ್ ಪಾಣಕ್ಕಾಡ್ ತಂಙಳ್ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ

error: Content is protected !!
Scroll to Top