ಚಿಲ್ಲರೆ ಇಲ್ಲವೆಂದು ವೃದ್ಧರೋರ್ವರನ್ನು ಅರ್ಧ ದಾರಿಯಲ್ಲಿ ಇಳಿಸಿದ ಕಂಡಕ್ಟರ್ – ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಅಮಾನವೀಯ ನಡೆಗೆ ವ್ಯಾಪಕ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಜ.06. ಚಿಲ್ಲರೆ ನೀಡಿಲ್ಲವೆಂಬ ನೆಪ ಹೇಳಿ ವೃದ್ಧರೋರ್ವರನ್ನು ರಸ್ತೆ ಬದಿ ಇಳಿಸಿ‌ಹೋದ ಘಟನೆ ಶನಿವಾರದಂದು ಕಡಬದಲ್ಲಿ ನಡೆದಿದ್ದು, ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಅಮಾನವೀಯ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಶನಿವಾರ ಬೆಳಿಗ್ಗೆ 9.30 ಗಂಟೆಗೆ ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲುಗುಡ್ಡೆಯಲ್ಲಿ ಹತ್ತಿದ್ದು, ಕಾಂಚನ ವರೆಗೆ ಟಿಕೆಟ್ ನೀಡುವಂತೆ 200 ರೂ. ನೀಡಿದರೆನ್ನಲಾಗಿದೆ. ಕಂಡಕ್ಟರ್ ಚಿಲ್ಲರೆ ಕೇಳಿದ್ದು, ವೃದ್ಧರು ಚಿಲ್ಲರೆ ಇಲ್ಲವೆಂದಾಗ ಅಲ್ಲೇ ಇಳಿಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಇಳಿಯುವ ವೇಳೆ ಚಿಲ್ಲರೆ ನೀಡಿದರೆ ಸಾಕೆಂದು ವೃದ್ಧರು ಮನವಿ ಮಾಡಿಕೊಂಡರಾದರೂ, ಕ್ಯಾರೇ ಎನ್ನದ ಕಂಡಕ್ಟರ್ ಗೋಳಿಯಡ್ಕ ಎಂಬಲ್ಲಿ ವೃದ್ಧರನ್ನು ರಸ್ತೆ ಬದಿ ಇಳಿಸಿ ಹೋಗಿರುವುದಾಗಿ ತಿಳಿದುಬಂದಿದೆ.

Also Read  ವೈವಾಹಿಕ ಜಾಲತಾಣದ ಮೂಲಕ ಯುವಕರಿಗೆ ಮೋಸ ➤ ಶಿಕ್ಷಕಿಯ ಬಂಧನ

error: Content is protected !!
Scroll to Top