ಮರ್ಧಾಳದ ಯುವಕರ ಪ್ರವಾಸಿ ಸಂಘಟನೆ NIIYF ಯಶಸ್ವಿ 7ನೇ ವರ್ಷಕ್ಕೆ ಪಾದಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜ.01. ಬದ್ರಿಯಾ ಜುಮ್ಮಾ ಮಸೀದಿ ಮರ್ಧಾಳ ಜಮಾಅತ್ ಗೆ ಒಳಪಟ್ಟ ಪ್ರವಾಸಿಗಳ ಸಂಘಟನೆಯಾದ ನುಸ್ರತುಲ್ ಇಸ್ಲಾಂ ಇಂಟರ್ ನ್ಯಾಷನಲ್ ಯೂತ್ ಫೆಡರೇಷನ್ ಕಳೆದ ಆರು ವರ್ಷಗಳ ಹಲವಾರು ಸಾಂತ್ವನ , ಜೀವ ಕಾರುಣ್ಯ, ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಇದೀಗ 7ನೇ ವರ್ಷಕ್ಕೆ ಪಾದರ್ಪಣೆ ಮಾಡಿದೆ.

ಶನಿವಾರದಂದು ಅಂತರ್ಜಾಲದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕೆನರಾ, ಅಧ್ಯಕ್ಷರಾಗಿ ಹೈದರ್ ಜಝೀರ, ಕಾರ್ಯದರ್ಶಿಯಾಗಿ ಹೈದರ್ ಕೊಯಿನೂರ್ ಹಾಗೂ ಕೋಶಾಧಿಕಾರಿಯಾಗಿ ಅಶ್ರಫ್ ಕೊಡಂಕೇರಿಯವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಶ್ರಫ್ ಶಾಂತಿನಗರ ಜೊತೆ, ಕಾರ್ಯದರ್ಶಿಯಾಗಿ ಹಬೀಬ್ ನಿಂತಿಕಲ್ಲು, ಸಾಂತ್ವನ ಕನ್ವೀನರ್ ಆಗಿ ಜಾಫರ್ ಮಿತ್ತೋಡಿ ಹಾಗೂ ಲೆಕ್ಕಪರಿಶೋಧಕರಾಗಿ ನಿಸಾರ್ ಖಾನ್ ರವರನ್ನು ಆಯ್ಕೆ ಮಾಡಲಾಯಿತು. ಸೌದಿ ಅರೇಬಿಯಾ, ದುಬೈ, ಖತರ್, ಕುವೈಟ್, ಇಂಗ್ಲೆಂಡ್, ಒಮನ್, ಬಹರೈನ್ ದೇಶಗಳಿಂದ ಸುಮಾರು 40-45 ಸದಸ್ಯರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಹಾಜಿ ಸಿರಾಜ್ ಕೊಡಿಕಂಡರವರ ಘನ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಹಬೀಬ್ ಉಸ್ತಾದ್ ರವರ ದುವಾದೊಂದಿಗೆ ಪ್ರಾರಂಭಗೊಂಡು ನಿಸಾರ್ ಖಾನ್ ವಂದನೆಯೊಂದಿಗೆ ಸಮಾಪ್ತಿಯಾಯಿತು.

Also Read  ನಾಪತ್ತೆಯಾಗಿದ್ದ ನಟಿ ರೈಮಾ ಶಿಮು ಮೃತದೇಹ ಗೋಣಿಚೀಲದಲ್ಲಿ ಪತ್ತೆ..!

error: Content is protected !!
Scroll to Top