ಮರ್ಧಾಳ: ಇಂದು ಸೌಜನ್ಯಾಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.31. ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟಿದ್ದ ಧರ್ಮಸ್ಥಳದ ಸೌಜನ್ಯಾಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಇಂದು (ಡಿ.31) ಅಪರಾಹ್ನ ಮರ್ಧಾಳದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಸೌಜನ್ಯ ಹೋರಾಟ ಸಮಿತಿ ಕಡಬ ತಾಲೂಕು ವತಿಯಿಂದ ಮರ್ಧಾಳ ಹಾಲು ಸೊಸೈಟಿ ಸಮೀಪ ಭಾನುವಾರ ಮಧ್ಯಾಹ್ನ 1.30 ರಿಂದ ಈ ವರ್ಷದ ಕೊನೆಯ ಪ್ರತಿಭಟನೆ ನಡೆಯಲಿದ್ದು, ಪ್ರಮುಖರಾದ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ನೀತಿ ತಂಡದ ಜಯಂತ್ ಟಿ, ವಕೀಲ ಮೋಹಿತ್, ತಮ್ಮಣ್ಣ ಶೆಟ್ಟಿ, ಶ್ರೀಮತಿ ಪ್ರಸನ್ನಾ ರವಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ‌.

Also Read  ಕೆಲಸ ಕೊಡಿಸ್ತೀವಿ ಅಂತಾ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ ಅರೆಸ್ಟ್..!

error: Content is protected !!
Scroll to Top