ಕಡಬ: ಮೇಯಲು ಬಿಟ್ಟಿದ್ದ ದನ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ – ಕಾಡಾನೆ ದಾಳಿಯ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ.6. ಮೇಯಲು ಬಿಟ್ಟಿದ್ದ ದನವೊಂದು ತೋಟದಲ್ಲಿ ಗಾಯಗೊಂಡು ಮೃತಪಟ್ಟಿದ್ದು, ಆನೆ ದಾಳಿ ನಡೆಸಿದ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಕಡಬ ತಾಲೂಕು ಕೊಣಾಜೆ ದೊಡ್ಡಮನೆ ನಿವಾಸಿ ಅಶೋಕ್ ಎಂಬವರಿಗೆ ಸೇರಿದ ದನವನ್ನು ಮಂಗಳವಾರ ಮೇಯಲು ಬಿಡಲಾಗಿತ್ತು. ಸಂಜೆ ವೇಳೆಗೆ ಮನೆಯವರು ಹುಡುಕಾಡಿದಾಗ ದನ ಸಿಕ್ಕಿರಲಿಲ್ಲ. ಬುಧವಾರ ಬೆಳಿಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ದನ ತೋಟದಲ್ಲಿ ಗಾಯಗೊಂಡು ಸತ್ತು ಬಿದ್ದಿರುವುದು ಕಂಡುಬಂದಿದೆ. ತೋಟದಲ್ಲಿ ನೀರಾವರಿ ಪೈಪ್ ಗಳಿಗೆ ಹಾನಿಯಾಗಿದ್ದು, ರಾತ್ರಿ ವೇಳೆ ಆನೆ ಬಂದಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Also Read  ಮೇ 18ರಂದು ಯುಎಇಯಿಂದ 2ನೇ ವಿಮಾನ ಮಂಗಳೂರಿಗೆ

error: Content is protected !!
Scroll to Top