(ನ್ಯೂಸ್ ಕಡಬ) newskadaba.com ಕಡಬ, ಅ.29. ಕಳೆದ ತಿಂಗಳು ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮುರಚೆಡವು ಎಂಬಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣವನ್ನು ಕಡಬ ಪೊಲೀಸರು ಭೇದಿಸಿದ್ದಾರೆ.
ಕಳೆದ ಸೆಪ್ಟೆಂಬರ್ 30ರಂದು ಪ್ರಕಾಶ್ ಎಂಬವರ ರಿಕ್ಷಾಕ್ಕೆ ಕಡಬ – ಪಂಜ ರಸ್ತೆಯ ಮುರಚೆಡವು ಎಂಬಲ್ಲಿ ಬಿಳಿ ಬಣ್ಣದ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದ್ದು, ಕಾರನ್ನು ನಿಲ್ಲಿಸದೆ ಪರಾರಿಯಾಗಿತ್ತು. ಈ ಕಾರನ್ನು ಕಡಬ ಠಾಣೆಯ ಅಪರಾಧ ಪತ್ತೆ ವಿಭಾಗದ PSI ಅಕ್ಷಯ್ ಢವಗಿ ಮತ್ತು ಸಿಬ್ಬಂದಿ ಸಿಸಿ ಕ್ಯಾಮರಾದ ಮೂಲಕ ಪತ್ತೆ ಹಚ್ಚಿದ್ದು, ಸುಳ್ಯ ಪೇಟೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.