ಮೇಯಲು ಬಿಟ್ಟಿದ್ದ ದನ ಕರುಗಳ ಕಳವು – ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಆ.17. ಮೇಯಲು ಬಿಟ್ಟಿದ್ದ ಎರಡು ದನ ಮತ್ತು ಒಂದು ಕರುವನ್ನು ಕಳವು ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರು ಮತ್ತು ಎರಡು ದನಗಳು ಕಳವಾಗಿದ್ದು, ಮೇಯಲು ಹೋಗಿದ್ದ ದನ ಕರುಗಳ ಪೈಕಿ 2 ದನಗಳು ಮನೆಗೆ ಮರಳಿದ್ದು, ಒಂದು ಕರು ವಾಪಸಾಗಿಲ್ಲ. ಈ ಕುರಿತು ಹುಡುಕಾಟ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬರು ಸಮೀಪದಲ್ಲಿರುವ ಅಂಗಡಿಯ ಸಿಸಿ ಕ್ಯಾಮೆರಾ ಪರಿಶೀಲಿಸುವಂತೆ ತಿಳಿಸಿದ್ದರು. ಅದರಂತೆ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಂಗಡಿಯ ಮುಂದೆ ಮಲಗಿದ್ದ ದನಗಳನ್ನು ಮತ್ತು ಕರುವನ್ನು ತಡ ರಾತ್ರಿ ವೇಳೆ ಇಬ್ಬರು ಕಳ್ಳರು ಹಿಡಿದು ಕಟ್ಟಿ ಕಾರಿನಲ್ಲಿ ತುಂಬಿಸುತ್ತಿರುವ ದೃಶ್ಯ ಸೆರೆಯಾಗಿರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.

error: Content is protected !!
Scroll to Top