ಬಿಬಿಎಂಪಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ – ಅಧಿಕಾರಿ ನಾಪತ್ತೆ – ದಾಖಲೆ ಪರಿಶೀಲನೆ

(ನ್ಯೂಸ್ ಕಡಬ)newskadaba. com ರಾಮನಗರ, ಆ.17. ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕನಕಪುರದಲ್ಲಿರುವ ಬಿಬಿಎಂಪಿ ಅಧಿಕಾರಿ ನಟರಾಜ್ ಅವರ ಮನೆ ಹಾಗೂ ಫಾರಂ ಹೌಸ್‌ ಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ರಾಮನಗರ ಲೋಕಾಯುಕ್ತ ಎಸ್ಪಿ ನೇತೃತ್ವದ ತಂಡ ಅಪಾರ ಪ್ರಮಾಣದ ಅಕ್ರಮ‌ ಆಸ್ತಿ ಸಂಪಾದನೆ ಆರೋಪ‌‌ ಹಿನ್ನೆಲೆ ಮನೆ ಜೊತೆಗೆ ಫಾರಂ ಹೌಸ್ ಮೇಲೂ ದಾಳಿ ಮಾಡಿದ್ದು, ಬಳಿಕ ಅಧಿಕಾರಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಬಿಬಿಎಂಪಿ ಅಧಿಕಾರಿ ನಟರಾಜ್ ಫಾರಂ ಹೌಸ್‌ ಗೆ ಬೀಗ ಹಾಕಲಾಗಿದ್ದು, ದಾಳಿ ಮಾಡಲು ಬಂದ ಅಧಿಕಾರಿಗಳು ಫಾರಂ ಹೌಸ್ ಬಳಿ ಕಾಯುತ್ತ ಕುಳಿತ್ತಿದ್ದರು ಎಂದು ವರದಿ ತಿಳಿಸಿದೆ.

Also Read  ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ ➤ ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ...!

 

error: Content is protected !!
Scroll to Top