ಸುಳ್ಯ: ಅನೈತಿಕ ಪೊಲೀಸ್ ಗಿರಿ – ಓರ್ವ ಆರೋಪಿ ವಶಕ್ಕೆ

(ನ್ಯೂಸ್ ಕಡಬ)newskadaba. com ಸುಳ್ಯ, ಆ.13. ಕರಾವಳಿಯಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ವರದಿಯಗಿದ್ದು, ಮಹಿಳೆಯೊಬ್ಬರಿಗೆ ಸುಳ್ಯದಲ್ಲಿ ತಂಗಲು ರೂಂ ಕೊಡಿಸಲು ಜೊತೆಗೆ ತೆರಳಿದ್ದ ಯುವಕನಿಗೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ತಿಳಿದುಬಂದಿದೆ.

ಸುಳ್ಯ ಠಾಣಾ ವ್ಯಾಪ್ತಿಯ ಅರಂತೋಡು ಸಮೀಪ ಮಣಪ್ಪುರಂ ನಿವಾಸಿ ಅರಂತೋಡಿನಲ್ಲಿ ಲೀಸ್‌ ಗೆ ತೋಟ ನಡೆಸುತ್ತಿರುವ ಜಲೀಲ್ ಮೇಲೆ ಹಲ್ಲೆ ನಡೆದಿದ್ದು, ಜಲೀಲ್‌ಗೆ ಕೇರಳದಲ್ಲಿ ಪರಿಚಯವಿದ್ದ ಮಹಿಳೆಯೊಬ್ಬರು ಮಡಿಕೇರಿಗೆ ಬಂದಿದ್ದು,ಅಲ್ಲಿಂದ ಊರಿಗೆ ಹಿಂದಿರುಗುವ ವೇಳೆ ಸುಳ್ಯದಲ್ಲಿ ಫ್ರೆಶ್ ಅಪ್ ಆಗಲು ರೂಮ್ ಬಯಸಿದ್ದರು. ಅವರು ಜಲೀಲ್ ನೆರವು ಕೇಳಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಕರೆದುಕೊಂಡು ಜಲೀಲ್ ಎರಡು ಕಡೆ ರೂಂ ಪಡೆಯಲು ಯತ್ನಿಸಿದ್ದರು ಎನ್ನಲಾಗಿದೆ.

Also Read  ರಾಜ್ಯಪಾಲರನ್ನು ದಿಢೀರ್ ಭೇಟಿಯಾದ ಸಿದ್ದರಾಮಯ್ಯ   ಕುತೂಹಲ ಮೂಡಿಸಿದ ಸಿಎಂ ನಡೆ.!

ಇದರ ಬೆನ್ನಲ್ಲೇ ತಂಡವೊಂದು ಕಾರಿನಲ್ಲಿ ಅರಂತೋಡು ಕಡೆಗೆ ತೆರಳುತ್ತಿದ್ದ ಜಲೀಲ್‌ ರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದೆ ಎಂದು ಪೊಲೀಸ್ ದೂರಿನಲ್ಲಿ ಜಲೀಲ್ ಉಲ್ಲೇಖಿಸಿದ್ದಾರೆ. ಓರ್ವನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

 

error: Content is protected !!
Scroll to Top