ಪುತ್ತೂರು: ಅಡಿಕೆ ಕಳ್ಳತನ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.com ಪುತ್ತೂರು, ಆ.11. ವ್ಯಕ್ತಿಯೋರ್ವರ ಮನೆಯಿಂದ ಅಡಿಕೆ ಯನ್ನು ಕದ್ದ ಕಳ್ಳರನ್ನು ಬಂಧಿಸುವಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

ಬಂಧಿತರನ್ನು ಆರೋಪಿಗಳನ್ನು ಪುತ್ತೂರಿನ ನಿವಾಸಿಗಳಾದ ಕಿರಣ್ ಕುಮಾರ್ ಹಾಗೂ ಸಂತೋಷ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ವಿಷ್ಣುಕಲ್ಲುರಾಯ ಅವರ ಮನೆಯಿಂದ 2 ಕ್ವಿಂಟಾಲ್ ಒಣ ಅಡಿಕೆ ಹಾಗೂ ಹುಲ್ಲು ತೆಗೆಯುವ ಮೇಷಿನ್ ಕಳ್ಳತನ ಮಾಡಿದ್ದರು. ಈ ಕುರಿತಂತೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 1 ಕ್ವಿಂಟಾಲ್ ಅಡಿಕೆ ಮತ್ತು ಹುಲ್ಲು ತೆಗೆಯುವ ಮೇಷಿನ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕಾರನ್ನು ವಶ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಶ್ರೀಮಂತ ದೇಶಗಳಿಗೆ 5.6 ಲಕ್ಷ ಭಾರತೀಯರು ವಲಸೆ

error: Content is protected !!
Scroll to Top