ಬೆಳ್ತಂಗಡಿ: ಧರ್ಮಸ್ಥಳ ಪರ ಬೃಹತ್ ಸಮಾವೇಶ – ಸೌಜನ್ಯ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.04.  ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅನೇಕ ರೀತಿಯ ಸುಳ್ಳಾರೋಪಗಳನ್ನು ಮಾಡಿ, ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆ ‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ಮಂಜುನಾಥ ಸ್ವಾಮಿಯ ಭಕ್ತಾಭಿಮಾನಿಗಳಿಂದ ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆ ಉಜಿರೆಯಲ್ಲಿ ನಡೆಯಿತು.


ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಪೇಟೆಯ ಮೂಲಕ ಸಾಗಿಬಂದ ಬೃಹತ್ ಮೆರವಣಿಗೆಯು, ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಜನರ ಜೊತೆ ಶಿಸ್ತು ಬದ್ಧವಾಗಿ ಸಾಗಿಬಂದಿತ್ತು. ಎಲ್ಲರ ಕೈಯಲ್ಲೂ ಕ್ಷೇತ್ರದ ಮತ್ತು ಡಾ. ಹೆಗ್ಗಡೆ ಪರ ಬರಹಗಳಿದ್ದ ಫಲಕಗಳಿದ್ದವು.
ಸುಮಾರು ಒಂದು ಕಿಲೋಮೀಟರ್ ದೂರ ಸಾಗಿದ ಈ ಜಾಥಾ, ಉಜಿರೆ ಎಸ್.ಡಿ.ಎಂ ಕಾಲೇಜು ಎದುರು ಒಂದು ಸೇರಿ ಬೃಹತ್ ಸಮಾವೇಶ ನಡೆಯಿತು.

Also Read  ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗವಕಾಶಗಳ ಸೃಷ್ಟಿ

ಸಭೆಯ ಬಳಿಕ ನಡೆದ ಪಾದಯಾತ್ರೆ ವೇಳೆ ಸ್ಥಳಕ್ಕೆ ಆಗಮಿಸಿದ ಸೌಜನ್ಯ ಕುಟುಂಬಸ್ಥರ ಮೇಲೆ ಭಕ್ತ ವೃಂದದ ಕೆಲವರು ಆಕ್ರೋಶಿತರಾಗಿ‌ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸೌಜನ್ಯ ತಾಯಿ ಕುಸುಮಾವತಿ ಮಗಳಿಗೆ ನ್ಯಾಯ ಕೊಡಿ ಎಂದು‌ ಸ್ಥಳಕ್ಕೆ‌ ತೆರಳಿದ್ದು, ಈ ವೇಳೆ ಅವರ ಮೇಲೆ ಪ್ರತಿಭಟನಾಕಾರರು ಆಕ್ರೋಶಿತರಾಗಿದ್ದಾರೆ. ಸೌಜನ್ಯ ಸಹೋದರ ಜಯರಾಮ ಗೌಡರನ್ನೂ ಎಳೆದಾಡಿದ್ದು, ಹಲ್ಲೆಗೆ ಯತ್ನಿಸಿರುವ ಘಟನೆಯೂ ನಡೆದಿದೆ ಎಂದು ವರದಿಯಾಗಿದೆ.

error: Content is protected !!
Scroll to Top