ಕಡಬ: ಕಾಡಾನೆ ದಾಳಿ; ಕೃಷಿ ನಾಶ



(ನ್ಯೂಸ್ ಕಡಬ)newskadaba.com ಕಡಬ, ಜು.31. ಕಾಡಾನೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ನಾಶಗೊಳಿಸಿದ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ಸಂಭವಿಸಿದೆ. ಇಚ್ಲಂಪಾಡಿ ಗ್ರಾಮದ ಕೊರಮೇರು ನಿವಾಸಿ ಕೆ.ರಮೇಶ್‌ ಗೌಡ, ಕುಶಾಲಪ್ಪ ಗೌಡ ದೇಸಾಲು, ಹೊನ್ನಪ್ಪ ಗೌಡ ದೇಸಾಲು ಅವರ ತೋಟಕ್ಕೆ ದಾಳಿ ಮಾಡಿರುವ ಕಾಡಾನೆ ಅಡಿಕೆ ಗಿಡ, ಬಾಳೆ ಗಿಡಗಳನ್ನು ಹಾನಿಗೊಳಿಸಿವೆ ಎನ್ನಲಾಗಿದೆ.






ಕೃಷಿ ತೋಟಕ್ಕೆ ನುಗ್ಗಿರುವ ಕಾಡಾನೆ ನೇಂದ್ರ ಬಾಳೆಗಿಡ ಹಾನಿಗೊಳಿಸಿದೆ ಮಾತ್ರವಲ್ಲದೇ ಬಿಂದು ಸಂತೋಷ್‌ ಅವರ ನಿರ್ಮಾಣ ಹಂತದ ಮನೆಯ ಸುತ್ತಲಿನ ತಡೆಗೋಡೆಯನ್ನು ಕೆಡವಿ ಹಾಕಿವೆ. ಅಲ್ಲದೇ ಅವರ ನಿರ್ಮಾಣ ಹಂತದ ಮನೆಯ ಮೆಟ್ಟಿಲನ್ನೂ ಹಾನಿಗೊಳಿಸಿವೆ. ಘಟನೆಯಿಂದ ಅಂದಾಜು 3 ಲಕ್ಷ ರೂ.ನಷ್ಟ ಸಂಭವಿಸಿದೆ. ಆನೆ ದಾಳಿ ಬಗ್ಗೆ ಎರಡೂ ಮನೆಯವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.






error: Content is protected !!
Scroll to Top