ಹಳ್ಳದಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 31. ಹಳ್ಳವೊಂದಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿದೆ ಎನ್ನಲಾಗಿದೆ. ಮೃತಪಟ್ಟವರನ್ನು ವರುಣ್‌ (27) ಮತ್ತು ವೀಕ್ಷಿತ್‌ (28) ಎಂದು ಗುರುತಿಸಲಾಗಿದೆ.

ವರುಣ್‌ ಮತ್ತು ವೀಕ್ಷಿತ್‌ ಹಳ್ಳದ ದಡದಲ್ಲೇ ಕುಳಿತ್ತಿದ್ದರು. ಕೆಲವೇ ಹೊತ್ತಿನಲ್ಲಿ ದಡದಲ್ಲಿ ಕುಳಿತಿದ್ದ ವರುಣ್‌ ಆಯತಪ್ಪಿ ನೀರಿಗೆ ಬಿದ್ದಿದ್ದರು. ಇದನ್ನು ಗಮನಿಸಿದ ವೀಕ್ಷಿತ್‌ ಕೂಡಲೇ ಹಳ್ಳಕ್ಕೆ ದುಮುಕಿದರು. ಆದರೆ, ಹಳ್ಳದಲ್ಲಿ ಹೂಳು ತುಂಬಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಮಂಗಳೂರು ಗೋಲಿಬಾರ್ ಪ್ರಕರಣ ➤ ಸರ್ಕಾರದ ಕೈಸೇರಿದ ಮೆಜಿಸ್ಟೀರಿಯಲ್ ತನಿಖೆ ವರದಿ

 

 

error: Content is protected !!
Scroll to Top