ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಜು.31. ನಾಪತ್ತೆಯಾಗಿದ್ದ ಜಡ್ಕಲ್ ಗ್ರಾಮದ ಕೊಳಕೆಹೊಳೆ ಮೆಕ್ಕೆ ನಿವಾಸಿ ಮಂಜ ಅವರ ಪುತ್ರ ಸುರೇಶ್ (28) ಅವರ ಮೃತದೇಹ 7 ದಿನಗಳ ಬಳಿಕ ಕೆರೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.


ಜು. 23 ರ ರಾತ್ರಿ ತಮ್ಮ ಕುಟುಂಬ ಸದಸ್ಯರೊಂದಿಗೆ ರಾತ್ರಿ ಊಟದ ನಂತರ ಸುರೇಶ್ ರಾತ್ರಿ 8 ಗಂಟೆ ಸುಮಾರಿಗೆ ಮಲಗಿದ್ದರು. ಮರುದಿನ ಬೆಳಗ್ಗೆ ಎದ್ದಾಗ ಆತ ಕಾಣೆಯಾಗಿದ್ದ. ಕೆರೆಯದಡದಲ್ಲಿ ಕುಳಿತು ಗಂಟೆಗಟ್ಟಲೆ ಕೆರೆಯತ್ತ ಕಣ್ಣು ಹಾಯಿಸುವ ಅಭ್ಯಾಸವಿತ್ತು ಎಂದು ಸ್ಥಳೀಯರು ಹೇಳ್ತಾರೆ. ನಾಪತ್ತೆಯಾದ ದಿನದಿಂದ ಕೆರೆಯ ಸಮೀಪವೇ ಇದ್ದಿರಬಹುದು ಎನ್ನಲಾಗಿದ್ದು, ಭಾರೀ ಮಳೆಗೆ ಕೆರೆಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.

Also Read  ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕ..! - 8 ನೌಕರರಿಗೆ ಗಾಯ

error: Content is protected !!
Scroll to Top