(ನ್ಯೂಸ್ ಕಡಬ)newskadaba.com ಮಂಡ್ಯ, ಜು.29. ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ ಆರ್ ಎಸ್ ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ತುಂಬುತ್ತಿರುವ ಡ್ಯಾಂನ ಹಿನ್ನೀರಿನಲ್ಲಿ ನೀರು ನಾಯಿಗಳು ಕಂಡು ಬಂದಿದ್ದು, ಕ್ಯಾಮರಾ ಕಂಡೊಡನೆ ನೀರಿನಲ್ಲಿ ಮರೆಯಾಗಿವೆ.
ಈ ಪೈಕಿ ಒಂದು ನೀರು ನಾಯಿ, ನೀರಿನಲ್ಲಿ ಮುಳಗಿ ಮತ್ತೆ ಮೇಲೆ ಬಂದು ಕ್ಯಾಮರಾ ನೋಡುತ್ತಿರುವ ದೃಶ್ಯ ಕೂಡ ಕಂಡುಬಂದಿದೆ.
