ಪಡಿತರ ಚೀಟಿಯಿಂದ ಮೃತರ ಹೆಸರು ತೆಗೆಯಲು ಡಿಸಿ ಸೂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.29 ದ.ಕ ಜಿಲ್ಲೆಯಲ್ಲಿನ ಕೆಲವೊಂದು ಕುಟುಂಬಗಳ ಸದಸ್ಯರು ಮೃತರಾಗಿದ್ದರೂ ಕೂಡ ಅವರ ಹೆಸರು ಪಡಿತರ ಚೀಟಿಯಲ್ಲಿ ತೆಗೆದು ಹಾಕಿಲ್ಲ. ಈ ರೀತಿಯ 13,133 ಫಲಾನುಭವಿಗಳ ಹೆಸರು ಪಡಿತರ ಚೀಟಿಯಲ್ಲಿ ಅಕ್ರಮವಾಗಿ ಉಳಿಸಿರುವುದು ಪತ್ತೆಯಾಗಿದೆ.


ಅಂತಹ ಪಡಿತರ ಚೀಟಿದಾರರು ಮೃತಪಟ್ಟವರ ದಾಖಲಾತಿಯನ್ನು ತಾಲೂಕು ಕಚೇರಿಗೆ ಸಲ್ಲಿಸಿ ಪಡಿತರ ಚೀಟಿಯಿಂದ ಮೃತಪಟ್ಟವರ ಹೆಸರನ್ನು ತೆಗೆಸಬೇಕು. ಇಲ್ಲದಿದ್ದರೆ ನಿಯಾಮಾನುಸಾರ ಅನರ್ಹಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top