3 ವಿದ್ಯುತ್ ತಂತಿಗಳ ಕಳ್ಳತನ



(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಜು.29. ಪಿಕಪ್ ವಾಹನದಲ್ಲಿ ತುಂಬಿಸಿದ್ದ 5 ಬಂಡಲ್ ವಿದ್ಯುತ್ ತಂತಿಗಳ ಪೈಕಿ 3 ಬಂಡಲ್ ವಿದ್ಯುತ್ ತಂತಿ ಕಳವುಗೈದಿರುವ ಘಟನೆ ವರದಿಯಾಗಿದೆ.






ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನಿವಾಸಿ ರಾಘವೇಂದ್ರ ನಾಯ್ಕ್ ಎಂಬವರು ರಾತ್ರಿ ವೇಳೆ ನೆಲ್ಯಾಡಿಯಲ್ಲಿರುವ ಈಗಲ್ ಸಂಸ್ಥೆಗೆ ಸೇರಿದ ಗೋದಾಮಿನಿಂದ 5 ಬಂಡಲ್ ವಿದ್ಯುತ್ ತಂತಿಗಳನ್ನು ಪಡೆದುಕೊಂಡು ಅವರ ಬೊಲೆರೋ ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದು ರಾತ್ರಿ 10.30ರ ವೇಳೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿರುವ ಅವರ ವಾಸದ ಕೊಠಡಿಗೆ ವಿಶ್ರಾಂತಿಗೆ ಹೋಗಿದ್ದರು ಎನ್ನಲಾಗಿದೆ.







ವಾಹನದ ಬಳಿ ಬಂದು ಪರಿಶೀಲಿಸಿದಾಗ ವಾಹನದಲ್ಲಿ ತುಂಬಿಸಿಟ್ಟಿದ್ದ 5 ಬಂಡಲ್ ವಿದ್ಯುತ್ ತಂತಿಗಳ ಪೈಕಿ 3 ತಂತಿಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ರಾಘವೇಂದ್ರ ನಾಯ್ಕ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

 

error: Content is protected !!
Scroll to Top