ಮನೆಯ ಮೇಲೆ ಕುಸಿದು ಬಿದ್ದ ಮರ – ಮಹಿಳೆ ಅಪಾಯದಿಂದ ಪಾರು !!



(ನ್ಯೂಸ್ ಕಡಬ)newskadaba.com ಪುತ್ತೂರು, ಜು.29. ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿರುವ ಘಟನೆ ಸರ್ವೆ ಗ್ರಾಮದ ರೆಂಜಿಲಾಡಿಯಲ್ಲಿ ರಾತ್ರಿ ಸಂಭವಿಸಿದೆ ಎನ್ನಲಾಗಿದೆ. ರೆಂಜಿಲಾಡಿ ನಿವಾಸಿ ಸರಕಾರಿ ಪ್ರೌಢ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿರುವ ಮೋಹಿನಿ ಎಂಬವರ ಮನೆಗೆ ರಾತ್ರಿ ವೇಳೆ ಮರ ಮುರಿದು ಬಿದ್ದಿದ್ದು, ಮನೆಯ ಹಿಂಭಾಗದ ಗೋಡೆ, ಶೀಟ್ ಸಂಪೂರ್ಣ ಕುಸಿದು ಬಿದ್ದಿದೆ ಎನ್ನಲಾಗಿದೆ.





ಮನೆಯಲ್ಲಿ ಮೋಹಿಣಿ ಮಾತ್ರ ವಾಸವಾಗಿದ್ದು, ತನ್ನ ತಾಯಿಯ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.






 

error: Content is protected !!
Scroll to Top