(ನ್ಯೂಸ್ ಕಡಬ)newskadaba.com ಮಲ್ಪೆ, ಜು.27. ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟ ಪ್ರಕರಣ ಸಂಬಂಧ ರಾಜ್ಯಾದ್ಯಂತ ಬಿಜೆಪಿ ವ್ಯಾಪಕ ಪ್ರತಿಭಟನೆಯ ಮೂಲಕ, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ. ಇದೇ ಸಂದರ್ಭದಲ್ಲಿ ಟ್ವಿಟ್ಟರ್ ನಲ್ಲಿ ಫೇಕ್ ವೀಡಿಯೋ ಒಂದನ್ನು ಹಾಕಿ, ಕೋಮು ಸೌಹಾರ್ಧತೆಗೆ ಧಕ್ಕೆ ತಂದ ವ್ಯಕ್ತಿಯೊಬ್ಬರ ವಿರುದ್ಧ ಮಲ್ಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೋಷಿಯಲ್ ಮೀಡಿಯಾ ಬಳಕೆ ಜಾಸ್ತಿಯಾದಂತೆ ಯಾವುದು ಅಸಲಿಯೋ, ಯಾವುದು ನಕಲಿಯೋ ಎಂಬುದನ್ನು ಪತ್ತೆ ಹಚ್ಚೋದೇ ಕಷ್ಟವಾಗಿ ಬಿಟ್ಟಿದೆ. ನಕಲಿಯಾದಂತ ವೀಡಿಯೋ ಒಂದನ್ನು ಆ ಘಟನೆ ಸಂಬಂಧವಿಲ್ಲದೇ ಇದ್ದರೂ ಟ್ವಿಟ್ ಮಾಡಿದಂತ ಕಾಲು ಸಿಂಗ್ ಚೌಹಾಣ್ ಎಂಬುವರ ವಿರುದ್ಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.