ರಜೆ ನೀಡಿದ ಜಿಲ್ಲಾಧಿಕಾರಿಗೆ ಮಕ್ಕಳಿಂದ ಅಭಿನಂದನೆ – ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 27. ದ.ಕ ಜಿಲ್ಲೆಯಲ್ಲಿ ಎಡೆ ಬಿಡದೆ ಬೀಳುತ್ತಿರುವ ಭಾರೀ ಗಾಳಿ ಮಳೆಗೆ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲ್ಲೈ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರಂತರವಾಗಿ ಶಾಲೆ ರಜೆ ನೀಡುತ್ತಿದ್ದು, ಇದೀಗ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳು ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.


ವೀಡಿಯೋದಲ್ಲಿ ವಿದ್ಯಾರ್ಥಿಯೋರ್ವ ತನ್ನ ಕಚೇರಿಯೊಂದರಲ್ಲಿ ದ.ಕ ಜಿಲ್ಲಾಧಿಕಾರಿಯ ಫೋಟೋಗಳನ್ನು ಅಂಟಿಸಿ ಕೂತಿದ್ದು, ಆತನ ಬಳಿ ಇನ್ನೋರ್ವ ಬಂದು ಇದು ಯಾರ ಫೋಟೋ ಇಷ್ಟೋಂದು ಅಂಟಿಸಿದ್ದೀಯಾ ಎಂದು ಕೇಳುತ್ತಾನೆ. ಆಗ ಆ ವಿದ್ಯಾರ್ಥಿ ಇದು ನಮ್ಮ  ಜಿಲ್ಲಾಧಿಕಾರಿ. ಮಳೆ ಬಂದಾಗ ನಮಗೆ ಶಾಲೆಗೆ ರಜೆ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಫೋಟೋ ತೋರಿಸಿ ವಿವರಿಸುತ್ತಾನೆ. ಈ ಸಂದರ್ಭ ಮತ್ತೋರ್ವ ವಿದ್ಯಾರ್ಥಿ ಬಂದು ಜಿಲ್ಲಾಧಿಕಾರಿಗೆ ಜೈ ಎಂದು ಘೋಷಣೆ ಕೂಗುತ್ತಿರುವುದು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿದೆ.

Also Read  ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ..!

error: Content is protected !!
Scroll to Top