ಮಠ, ದೇವಸ್ಥಾನಗಳಿಗೆ ಸಿಎಂ ಸಿದ್ದರಾಮಯ್ಯ 20 ಕೋಟಿ ರೂ. ಅನುದಾನ ಘೋಷಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.27. 2023-24 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ ಮಠ, ದೇವಸ್ಥಾನಗಳಿಗೆ 20 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ದೇವಸ್ಥಾನಗಳ ಜೊತೆಗೆ ಮಠಗಳಿಗೂ ಅನುದಾನ ನೀಡಲು ಮುಂದಾಗಿದ್ದಾರೆ.

ತಮ್ಮ ಹಿಂದಿನ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಮಠಗಳಿಗೆ ಅನುದಾನ ನೀಡುತ್ತಿರಲಿಲ್ಲ. ಈ ಬಾರಿ ಮಠಗಳಿಗೂ ಅನುದಾನ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಜ್ಯದ ಪ್ರಮುಖ ಮಠಗಳಾದ ಆದಿಚುಂಚನಗಿರಿ, ಸಿದ್ದಗಂಗಾ ಹಾಗೂ ಕಾಗಿನೆಲೆ ಕನಕ ಗುರುಪೀಠ, ಕೂಡಲಸಂಗಮದ ಪಂಚಮಸಾಲಿ ಪೀಠ ಸೇರಿದಂತೆ ಹಲವು ಮಠಗಳು ಸರ್ಕಾರದ ಅನುದಾನ ಪಡೆಯುತ್ತಿವೆ.

Also Read  ಅಂಕೋಲಾ ಬಸ್ ನಿಲ್ದಾಣದ ಶೌಚಾಲಯದಲ್ಲಿ ಒಂದೂವರೆ ಗಂಟೆಗಳ ಕಾಲ ಮಲಗಿದ ಕರಾವಳಿಯ ವ್ಯಕ್ತಿ..!!!

 

error: Content is protected !!
Scroll to Top