ಯುವಕನೋರ್ವ ಧಿಢೀರ್ ನಾಪತ್ತೆ – ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಜು.26. ಬೈಂದೂರು ತಾಲ್ಲೂಕು ಜಡ್ಕಲ್ ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ್‌ (28) ಮನೆಯಿಂದ ನಾಪತ್ತೆಯಾಗಿರುವ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತನ್ನ ವಾಸದ ಮನೆಯಾದ ಮಕ್ಕೆಯ ಕೊಳಕೆಹೊಳೆ ಎಂಬಲ್ಲಿ ಮನೆ ಊಟ ಮಾಡಿ ಮಲಗಿದ್ದ ಅವರು, ಮನೆಯವರು ಎದ್ದು ನೋಡಿದಾಗ ಸುರೇಶ್ ಮನೆಯಿಂದ ನಾಪತ್ತೆಯಾಗಿರುವ ಕುರಿತು ತಿಳಿದಿದೆ. ಈ ಬಗ್ಗೆ ಸಹೋದರ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಕಳೆದ ಎರಡು ದಿನಗಳಿಂದ ನಾಪತ್ತೆಯಾದ ಸುರೇಶ್‌ ಅವರ ಪತ್ತೆಗೆ ಗ್ರಾಮಸ್ಥರ ನೆರವಿನೊಂದಿಗೆ ಕುಟುಂಬಿಕರು ಶೋಧ ಕಾರ್ಯ ನಡೆಸುತ್ತಿದ್ದು, ಈವರೆಗೂ ಯಾವುದೇ ಮಾಹಿತಿ ದೊರಕಿಲ್ಲ ಎನ್ನಲಾಗಿದೆ‌.

Also Read  ನೀತಿ ತಂಡದಿಂದ ಚೀನಾ ವಸ್ತುಗಳ ವಿರುದ್ಧ ಜನಜಾಗೃತಿ ಜಾಥಾ

error: Content is protected !!
Scroll to Top