(ನ್ಯೂಸ್ ಕಡಬ)newskadaba.com ಪುತ್ತೂರು,ಜು.26. ಉಪ್ಪಿನಂಗಡಿ ಭಾಗದ ವಿದ್ಯುತ್ ಸುಧಾರಣೆಗೆ ರೂಪಿಸಿರುವ 34 ನೆಕ್ಕಿಲಾಡಿ ಗ್ರಾಮದ ಕರುವೇಲುವಿನಲ್ಲಿ 110 ಕೆ.ವಿ ಉಪಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸಿದೆ. ಇದರ ಅನುಮೋದನೆ ನೀಡುವಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಜಮೀನಿಗೆ ಹಣ ಪಾವತಿಯಾಗಿ ಜಿಲ್ಲಾಧಿಕಾರಿಯಿಂದ ಮಂಜೂರಾತಿ ಕ್ರಮವು ದೊರಕಿದೆ ಎನ್ನಲಾಗಿದೆ.
40 ವರ್ಷಗಳ ಬಳಿಕ ಪುತ್ತೂರು ತಾಲೂಕಿಗೆ 2ನೇ 110 ಕೆವಿ ಉಪಕೇಂದ್ರ ಮಂಜೂರು ಆಗಿದ್ದು, ಕಳೆದ 15 ವರ್ಷಗಳ ಬೇಡಿಕೆಯಾಗಿದ್ದ ಉಪ್ಪಿನಂಗಡಿ ಭಾಗದ 34 ನೆಕ್ಕಿಲಾಡಿ ಗ್ರಾಮದ ಕರುವೇಲ್ ನಲ್ಲಿ ವಿದ್ಯುತ್ ಉಪಕೇಂದ್ರಕ್ಕೆ ಹಲವು ಪ್ರಯತ್ನಗಳು ನಡೆದಿತ್ತು.