(ನ್ಯೂಸ್ ಕಡಬ)newskadaba.com ಮಂಡೆಕೋಲು, ಜು.26. ಮಂಡೆಕೋಲು ಗ್ರಾಮದಲ್ಲಿ ದಾಳಿ ಮುಂದುವರಿಸಿರುವ ಕಾಡಾನೆಗಳ ಹಿಂಡು ಬೊಳುಗಲ್ಲು ಭಾಗದಲ್ಲಿ ಕೃಷಿ ನಾಶ ಪಡಿಸಿದೆ ಎಂದು ವರದಿ ತಿಳಿಸಿದೆ.
ಬೊಳುಗಲ್ಲು ಭಾಗದಲ್ಲಿ ದಾಳಿ ನಡೆಸಿದ ಆನೆಗಳ ಹಿಂಡು ಶುಭಕರ ಬೊಳುಗಲ್ಲು ಅವರ ತೋಟಕ್ಕೆ ನುಗ್ಗಿ ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶಪಡಿಸಿದ್ದು, ನೂರಕ್ಕೂ ಅಧಿಕ ಬಾಳೆ ಗಿಡಗಳನ್ನು ನಾಶಪಡಿಸಿವೆ ಎಂದು ಶುಭಕರ ಬೊಳುಗಲ್ಲು ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಗಡಿಪ್ರದೇಶವಾದ ಮಂಡೆಕೋಲಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಕನ್ಯಾನ, ಚಾಕೋಟೆ, ಬೊಳುಗಲ್ಲು ಭಾಗದಲ್ಲಿ ಕೃಷಿಕರ ತೋಟಕ್ಕೆ ಲಗ್ಗೆಯಿಟ್ಟು ಕೃಷಿ ನಾಶ ಪಡಿಸುತಿದೆ. ತೆಂಗು, ಕಂಗು, ಬಾಳೆ ಸಹೀತ ಕೃಷಿ ನಾಶಪಡಿಸಿದೆ.