ಪೊಲೀಸರಿಗೆ ಗುಡ್ ನ್ಯೂಸ್ – ಹುಟ್ಟು ಹಬ್ಬದ ದಿನ ರಜೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.26. ಹುಟ್ಟುಹಬ್ಬದ ದಿನ ಪೊಲೀಸರಿಗೆ ರಜೆ ನೀಡಲಾಗುವುದು. ರಾಜಧಾನಿ ಬೆಂಗಳೂರಿನ ಪೊಲೀಸರಿಗೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಶುಭ ಸುದ್ದಿ ನೀಡಿದ್ದು, ತಮ್ಮ ಹುಟ್ಟಿದ ದಿನವೂ ಕುಟುಂಬದವರೊಂದಿಗೆ ಸಮಯ ಕಳೆಯಲಾಗದೇ ಪರದಾಡುತ್ತಿದ್ದ ಪೊಲೀಸರಿಗೆ ಸಿಹಿ ಸುದ್ದಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಪೊಲೀಸರಿಗೆ ಇನ್ನು ಮುಂದೆ ಹುಟ್ಟು ಹಬ್ಬದ ದಿನ ರಜೆ ನೀಡಲಾಗುವುದು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಒಂದು ದಿನ ರಜೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

Also Read  ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಾಗಲಿಲ್ಲ ►ಆದ್ರೂ ಈಕೆಯ ಮನೆಯಲ್ಲಿ ನವಜಾತ ಶಿಶುಗಳು ಪತ್ತೆ...!!!

 

 

error: Content is protected !!
Scroll to Top