ಚಂದ್ರಯಾನ-3 ನೌಕೆಯ 5ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ – ಆ.1ರಿಂದ ಚಂದ್ರನತ್ತ ಪ್ರಯಾಣ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.26. ಶ್ರೀಹರಿಕೋಟಾದ ಉಡ್ಡಯನ ನಲೆಯಿಂದ ಹಾರಿಬಿಡಲಾಗಿದ್ದ ಚಂದ್ರಯಾನ-3 ನೌಕೆ 5ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂಬುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ತಿಳಿಸಿದೆ. ಚಂದ್ರಯಾನ-3 ನೌಕೆಯು 127609 ಕಿಲೋಮೀಟರ್ X236 ಕಿ.ಮೀ ಕಕ್ಷೆಯನ್ನು ಸೇರಿಕೊಳ್ಳಲಿದೆ ಎಂದು ಮಾಹಿತಿ ನೀಡಿದೆ.

ಮುಂದಿನ ಹಂತದಲ್ಲಿ ಆಗಸ್ಟ್ 1ರಂದು ಮಧ್ಯರಾತ್ರಿ 12 ಗಂಟೆಯಿಂದ 1 ಗಂಟೆಯ ಅವಧಿಯಲ್ಲಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಪ್ರಕ್ರಿಯೆ ನಡೆಸಲಾಗುವುದು. ಈ ಪ್ರಕ್ರಿಯೆ ಬಳಿಕ ನೌಕೆಯು ಭೂಮಿ ಸುತ್ತುವರೆಯುವುದನ್ನು ಬಿಟ್ಟು, ಚಂದ್ರನ ಕಡೆಗೆ ಪ್ರಯಾಣ ಬೆಳೆಸಲಿದೆ ಎಂದು ISRO ತಿಳಿಸಿದೆ. ಚಂದ್ರನ ಕಕ್ಷೆಯ ಸುತ್ತ ಕೆಲ ದಿನಗಳ ಕಾಲ ಸುತ್ತಲಿರುವಂತ ಚಂದ್ರಯಾನ-3 ನೌಕೆಯು, ಬಳಿಕ ಆಗಸ್ಟ್ 23ರಂದು ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡ್ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದಿದೆ.

Also Read  ಉಪ್ಪಿನಂಗಡಿ: ಬಸ್ ನಿಲ್ದಾಣದಲ್ಲಿ ಮುಂದುವರಿದ ಕಳ್ಳರ ಕೈಚಳಕ- ಒಂದೇ ದಿನ ಮೂರು ಪ್ರಕರಣ ➤ ಮಹಿಳೆಯ ಚಿನ್ನಾಭರಣ, ವಿದ್ಯಾರ್ಥಿನಿಯರ ಮೊಬೈಲ್ ಕದ್ದೊಯ್ದ ಕಳ್ಳರು..!!!

 

error: Content is protected !!
Scroll to Top