(ನ್ಯೂಸ್ ಕಡಬ)newskadaba.com ಪುತ್ತೂರು, ಜು.26. ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡ ಸೋರಿಕೆಯಾಗುತ್ತಿದ್ದು, ಈ ಕುರಿತು ಕಟ್ಟಡದ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರನ್ನು ಶಾಸಕರು ತರಾಟೆಗೆತ್ತಿಕೊಂಡು ತನ್ನ ಕಚೇರಿಗೆ ಬರುವಂತೆ ತಿಳಿಸಿದ್ದರು.
ಕಚೇರಿಗೆ ಬಂದ ಸಂಸ್ಥೆಯವರನ್ನು ಶಾಸಕರು ಮತ್ತೇ ಎತ್ತಿಕೊಂಡಿದ್ದು, ಕಾಮಗಾರಿ ಕಳಪೆಯಾಗದಂತೆ ಮತ್ತು ಎಲ್ಲಾ ಕೆಲಸಗಳನ್ನು 15 ದಿನದೊಳಗೆ ಪೂರ್ಣ ಮಾಡಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆಮೆಗತಿಯಲ್ಲಿ ಸಾಗಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಲೇಜಿಗೆ ಭೇಟಿ ನೀಡಿದ ಶಾಸಕರು ನೀರು ಹರಿಯುತ್ತಿರುವುದನ್ನು ಕಂಡು ಆಕ್ರೋಶಗೊಂದ್ದರು. ಮೆಟ್ಟಿಲುಗಳಲ್ಲಿ ರಕ್ಷಾ ರಾಡ್ ಅಳವಡಿಸಿಲ್ಲ ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂದು ತರಾಟೆಗೆ ಎತ್ತಿಕೊಂಡರು.