ಕಾಲೇಜಿನ ಫೀಸ್ ಹಣದೊಂದಿಗೆ ಸಹಾಯಕ ಪ್ರಾಧ್ಯಾಪಕಿ ನಾಪತ್ತೆ – ವಿದ್ಯಾರ್ಥಿಗಳ ಪರದಾಟ

(ನ್ಯೂಸ್ ಕಡಬ)newskadaba.com ಮೈಸೂರು, ಜು.25. ಮೈಸೂರಿನ ಪ್ರತಿಷ್ಠಿತ ಎಟಿಎಂಇ ಕಾಲೇಜಿನ ಸಹಾಯಕ ಪ್ರಧ್ಯಾಪಕಿ ಹರ್ಷಿತಾ 200 ವಿದ್ಯಾರ್ಥಿಗಳಿಂದ ಫೀಸ್ ಹಣ ಎಂದು ಬರೋಬ್ಬರಿ 25 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಅವರ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಹರ್ಷಿತಾ ಪರೀಕ್ಷೆ ಫೀಸ್ ಸಂಗ್ರಹಿಸಿದ್ದಾರೆ. ನಗದು ಮಾತ್ರವಲ್ಲದೆ ವಿದ್ಯಾರ್ಥಿಗಳು ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸಿದ್ದಾರೆ. ಇದಕ್ಕೆ ನಕಲಿ ರಶೀದಿ ನೀಡಿ ಹರ್ಷಿತಾ ಮೋಸ ಮಾಡಿದ್ದಾರೆ.
ಈಗಾಗಲೇ ಪರೀಕ್ಷೆ ಆರಂಭವಾಗಿದೆ. ಕಾಲೇಜು ಆಡಳಿತ ಮಂಡಳಿ ತಮಗೂ ಹರ್ಷಿತಾಗೂ ಸಂಬಂಧವಿಲ್ಲ. ವಿದ್ಯಾರ್ಥಿಗಳು ಹೊಸದಾಗಿ ಫೀಸ್ ಕಟ್ಟಬೇಕು ಎಂದು ಹೇಳಿದೆ. ಹೀಗಾಗಿ ಮತ್ತೊಮ್ಮೆ ಫೀಸ್ ಕಟ್ಟಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇದೀಗ ಎಟಿಎಂಐ ಕಾಲೇಜು ವಿರುದ್ಧವೂ ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ.

Also Read  ಬೈಂದೂರು: ಬೈಕುಗಳ ಢಿಕ್ಕಿ; ಓರ್ವ ಮೃತ್ಯು

error: Content is protected !!
Scroll to Top