ಬಿಜೆಪಿ ಜೊತೆ ಮೈತ್ರಿಯೋ- ಸ್ವತಂತ್ರ ಸ್ಪರ್ಧೆಯೋ – ದೇವೇಗೌಡ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.25. ಕಳೆದ ಕೆಲ ವಾರಗಳಿಂದ ಚರ್ಚೆಯ ವಿಚಾರವಾಗಿರುವ ಲೋಕಸಭೆ ಚುನಾವಣೆಗೆ ಬಿಜೆಪಿ – ಜೆಡಿಎಸ್ ಮೈತ್ರಿ ಸಾಧ್ಯತೆ ಕುರಿತಂತೆ ಜಾತ್ಯತೀತ ಜನತಾ ದಳ ವರಿಷ್ಟ ಎಚ್.ಡಿ ದೇವೇಗೌಡರು ಸ್ಪಷ್ಟನೆ ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ನಡೆಸಲಿದೆ ಎಂದು ಹೇಳಿದರು.


ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ನಾವು ಐದು, ಆರು, ಮೂರು, ಎರಡು ಅಥವಾ ಒಂದು ಸ್ಥಾನವನ್ನು ಗೆದ್ದರೂ ಪರವಾಗಿಲ್ಲ, ನಾವು ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಡುತ್ತೇವೆ. ನಮ್ಮ ಕಾರ್ಯತಕರ್ತರ ಜೊತೆ ಸಮಾಲೋಚನೆ ನಡೆಸಿದ ನಂತರ ನಾವು ಪ್ರಬಲವಾಗಿರುವ ಸ್ಥಳಗಳಲ್ಲಿ ಮಾತ್ರ ನಾವು ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ದೇವೇಗೌಡರು ಹೇಳಿದರು.

Also Read  ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ➤‌ ಬಂಧಿತರನ್ನು ಬೆಳ್ಳಾರೆಗೆ ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು

error: Content is protected !!
Scroll to Top