ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿ ಅಕ್ರಮವಾಗಿ ಹಣ ಪಡೆಯುತ್ತಿದ್ದ 3 ಸೈಬರ್ ಕೇಂದ್ರಗಳು – FIR ದಾಖಲು

(ನ್ಯೂಸ್ ಕಡಬ)newskadaba.com ರಾಯಚೂರು, ಜು.25. ಗೃಹಲಕ್ಷ್ಮಿ ಯೋಜನೆಗೆ ಖಾಸಗಿ ಸೈಬರ್ ಕೇಂದ್ರಗಳಲ್ಲಿ ಅಕ್ರಮವಾಗಿ ಹಣ ಪಡೆದು ಅರ್ಜಿ ಸಲ್ಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಸೈಬರ್ ಕೇಂದ್ರಗಳ ವಿರುದ್ಧ ಪ್ರಕರಣ ದಾಖಲಾದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಮಾನ್ವಿ ತಾಲೂಕಿನ ಮೂರು ಖಾಸಗಿ ಸೈಬರ್ ಕೇಂದ್ರಗಳಲ್ಲಿ 100-200 ರೂಪಾಯಿ ಹಣ ಪಡೆದು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ತಹಶೀಲ್ದಾರ್ ಚಂದ್ರಕಾಂತ್ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸರ್ಕಾರದ ಐಡಿ ಹೆಸರಲ್ಲಿ ಅಕ್ರಮವಾಗಿ ಅರ್ಜಿ ಸಲ್ಲಿಸುತ್ತಿರುವುದು ಪತ್ತೆಯಾಗಿತ್ತು.

Also Read  ಬರ್ತ್ ಡೇ ಪಾರ್ಟಿಯಲ್ಲಿ ಸಹೋದ್ಯೋಗಿಯ ಕೊಲೆ..!  4ಮಂದಿ ಅರೆಸ್ಟ್..!          

ಈ ಹಿನ್ನೆಲೆಯಲ್ಲಿ ಮೂರು ಸೈಬರ್ ಕೇಂದ್ರಗಳನ್ನು ತಹಶೀಲ್ದಾರ್ ಸೀಜ್ ಮಾಡಿ, ಮಾನ್ವಿ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ತಹಶೀಲ್ದಾರ್ ದೂರಿನ ಆಧಾರದ ಮೇಲೆ 3 ಖಾಸಗಿ ಸೈಬರ್ ಕೇಂದ್ರಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.

 

 

error: Content is protected !!
Scroll to Top