ಗೃಹಲಕ್ಷ್ಮಿ ಯೋಜನೆಗೆ ಉಚಿತ ನೋಂದಣಿಗೆ ಸರಕಾರದ ಆದೇಶ ➤ ಗ್ರಾಮ ಒನ್ ಸೇವಾ ಕೇಂದ್ರಗಳ ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಮನವಿ

(ನ್ಯೂಸ್ ಕಡಬ)newskadaba.com ಕಡಬ, ಜು.25. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗ್ಯಾರಂಟಿ ಯೋಜನೆಗೆ ಉಚಿತವಾಗಿ ನೋಂದಣಿಗೆ ಸರಕಾರ ಆದೇಶ ನೀಡಿರುವುದರಿಂದ ಗ್ರಾಮ ಒನ್ ಕೇಂದ್ರಗಳು ಸಂಕಷ್ಟಕ್ಕೆ ಒಳಗಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವಂತೆ ಕಡಬ ತಾಲೂಕಿನ ಗ್ರಾಮ ಒನ್ ಫ್ರಾಂಚೈಸಿನ ನಿರ್ವಾಹಕರು ಕಡಬ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕಡಬ ತಾಲೂಕಿನ ಸುಮಾರು 20 ಗ್ರಾಮ ಒನ್ ಫ್ರಾಂಚೈಸಿ ನಿರ್ವಾಹಕರು ಮನವಿ ನೀಡಿದ್ದು, ನಾವು ಒಂದು ವರುಷದ ಹಿಂದೆ ಗ್ರಾಮ ಒನ್ ಕೇಂದ್ರಗಳನ್ನು ಬಂಡವಾಳ ಹೂಡಿಕೆ ಮಾಡಿ ಆರಂಭಿಸಿರುತ್ತೇವೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನವರು ಗ್ರಾಮ ಪಂಚಾಯತ್ ಗಳಿಗೆ ಕಳುಹಿಸಿದ ಸುತ್ತೋಲೆಯಲ್ಲೂ ಗ್ರಾಮ ಒನ್ ಕೇಂದ್ರಗಳಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಡಬೇಕಾಗಿ ತಿಳಿಸಲಾಗಿದೆ.

Also Read  ಕರ್ನಾಟಕದಲ್ಲಿ 8000 ಕೋಟಿ ಬಂಡವಾಳ ಹೂಡಲು ಇಂಟರ್ ನ್ಯಾಷನಲ್ ಬ್ಯಾಟರಿ ಕಂಪನಿ ಆಸಕ್ತಿ..!

 

error: Content is protected !!
Scroll to Top