‘ಗೃಹಜ್ಯೋತಿ ನೋಂದಣಿ’ಗೆ ಇಂದು ಕೊನೇ ದಿನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.25. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆಯ ಕೂಡ. ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ನೋಂದಾಯಿಸಿಕೊಳ್ಳಲು ಇಂದು ಕೊನೆಯ ದಿನವಾಗಿದೆ ಎನ್ನಲಾಗಿದೆ. ಇಂದು ನೋಂದಾಯಿಸಿಕೊಂಡವರಿಗೆ ಮಾತ್ರವೇ ಆಗಸ್ಟ್ ತಿಂಗಳ ಬಿಲ್ ಮೊತ್ತ 00 ಬರಲಿದೆ.

ಗೃಹಜ್ಯೋತಿ ಯೋಜನೆಗೆ ನೋಂದಣಿ ಆರಂಭಗೊಂಡ ನಂತರ, ರಾಜ್ಯದಲ್ಲಿ ಈವರೆಗೆ ಇರುವಂತ ಫಲಾನುಭವಿಗಳಲ್ಲಿ ಶೇ.60ರಷ್ಟು ಗ್ರಾಹಕರು ಮಾತ್ರವೇ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಶೇ.40ರಷ್ಟು ವಿದ್ಯುತ್ ಗ್ರಾಹಕರು ನೋಂದಣಿ ಮಾಡುವುದು ಬಾಕಿ ಉಳಿದಿದೆ ಎನ್ನಲಾಗುತ್ತಿದೆ.

ವಿದ್ಯುತ್ ಸರಬರಾಜು ಕಂಪನಿ ನೀಡಿರುವ ಮಾಹಿತಿ ಪ್ರಕಾರ 1.92 ಕೋಟಿ ಗೃಹ ಬಳಕೆದಾರರಿದ್ದು, ಇವರಲ್ಲಿ ಶೇ.90ಕ್ಕೂ ಅಧಿಕ ಜನರು ಮಾಸಿಕ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದು, ಇವರಲ್ಲಿ 1.18 ರಿಂದ 1.20 ಕೋಟಿ ಮಂದಿ ಮಾತ್ರವೇ ನೋಂದಣಿ ಮಾಡಿಕೊಂಡಿದ್ದು, ಉಳಿದವರು ಇನ್ನೂ ನೋಂದಣಿ ಮಾಡಿಕೊಳ್ಳಬೇಕಿದೆ. ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಮೊದಲ ತಿಂಗಳಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಜುಲೈ.25ರ ಇಂದೇ ನೋಂದಣಿಗೆ ಕೊನೆಯ ದಿನವಾಗಿದೆ. ಇಂದು ಯಾರೆಲ್ಲಾ ಗೃಹ ಜ್ಯೋತಿಗೆ ನೋಂದಣಿ ಮಾಡಿಕೊಳ್ಳಲಿದ್ದಾರೋ ಅವರಿಗೆಲ್ಲ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ವಿದ್ಯುತ್ ಬಿಲ್ ಬರಲಿದೆ. ಒಂದು ವೇಳೆ ನೋಂದಾಯಿಸಿಕೊಳ್ಳದಿದ್ದರೇ ಆಗಸ್ಟ್ ನಂತರದ ತಿಂಗಳಿನ ಬಿಲ್ ಶೂನ್ಯ ಬರಲಿದೆ.

Also Read  ಕಾರ್ಕಳ : ವಿವಾಹ ನಿಶ್ಚಿತಗೊಂಡಿದ್ದ ಯುವತಿ ನಾಪತ್ತೆ

ಗೃಹಜ್ಯೋತಿ ಯೋಜನೆಗೆ ಅಂತಿಮ ಗಡುವು ನಿಗದಿ ಪಡಿಸಿಲ್ಲ. ಸೆಪ್ಟೆಂಬರ್ ನಲ್ಲಿ ಇದರ ಲಾಭ ಪಡಿಯಲು ಅವಕಾಶ ಇದೆ. ಆದ್ರೇ ಆಗಸ್ಟ್ ತಿಂಗಳಿನಲ್ಲಿ ಉಚಿತ 200 ಯೂನಿಟ್ ವಿದ್ಯುತ್ ಪ್ರಯೋಜನ ಪಡೆಯಲು ಇಂದು ನೋಂದಣಿ ಮಾಡಿಸಬೇಕಿದೆ.

 

error: Content is protected !!
Scroll to Top