ಗಮನ ಬೇರೆಡೆ ಸೆಳೆದು ಬ್ಯಾಗ್ ಕಳವುಗೈದ ಖದೀಮರು

(ನ್ಯೂಸ್ ಕಡಬ)newskadaba.com ಮಂಗಳೂರು, ಜು.25. ಗಮನ ಬೇರೆ ಕಡೆಗೆ ಸೆಳೆದು ಕಾರಿನಲ್ಲಿದ್ದ ಬ್ಯಾಗ್‌ ಕಳವು ಮಾಡಿದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ಮಹಿಳೆಯೋರ್ವರು ಪಿವಿಎಸ್‌ ಬಳಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಗೇಟಿನ ಮುಂಭಾಗದಲ್ಲಿ ಕಾರು ನಿಲ್ಲಿಸಿ ಕಾರು ಸರ್ವೀಸ್‌ ಸೆಂಟರ್‌ ಗೆ ಕರೆ ಮಾಡಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಆಗ ಅಪರಿಚಿತ ವ್ಯಕ್ತಿಯೋರ್ವ ಬಂದು 10 ರೂ. ನೋಟನ್ನು ಅವರ ಕಾರಿನ ಎಡಭಾಗದಲ್ಲಿ ಹಾಕಿ ನಿಮ್ಮ ಹಣ ಬಿದ್ದಿದೆ ಎಂದು ಹೇಳಿದ್ದು, ಮಹಿಳೆ ಅದನ್ನು ಹೆಕ್ಕುತ್ತಿದ್ದಾಗ ಅಪರಿಚಿತ ವ್ಯಕ್ತಿಯು ಕಾರಿನ ಬಲಬದಿಯಲ್ಲಿಯೂ ನೋಟು ಇರುವುದಾಗಿ ತಿಳಿಸಿದ. ಮಹಿಳೆ ಅದನ್ನು ಹೆಕ್ಕಿ ನೀಡಲು ಹೋದಾಗ ಮತ್ತೋರ್ವ ಅಪರಿಚಿತ ಎಡಭಾಗದಿಂದ ಕಾರಿನ ಡ್ರೈವರ್‌ ಸೀಟಿನಲ್ಲಿದ್ದ 20,000 ರೂ. ನಗದು, ಕ್ರೆಡಿಟ್‌ ಕಾರ್ಡ್‌, ಬೀಗದ ಕೀ ಮತ್ತು ಇತರ ದಾಖಲೆಗಳಿದ್ದ ಬ್ಯಾಗ್‌ ಕಳವು ಮಾಡಿಕೊಂಡು ಹೋಗಿದ್ದಾನೆ. ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಈ 8 ರಾಶಿಯವರಿಗೆ ಮದುವೆ ಯೋಗ ವ್ಯಾಪಾರ ದಾಂಪತ್ಯದಲ್ಲಿ ಹೊಂದಾಣಿಕೆ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಪಡೆದುಕೊಳ್ಳಿ

error: Content is protected !!
Scroll to Top