ಎಟಿಎಂನಲ್ಲಿದ್ದ 15 ಲಕ್ಷ ರೂ. ಎಗರಿಸಿದ ಖರ್ತನಾಕ್ ಕಳ್ಳರು

Theft, crime, Robbery

(ನ್ಯೂಸ್ ಕಡಬ)newskadaba.com ಕೋಲಾರ, ಜು.24. ಎಟಿಎಂ ನಲ್ಲಿ ಹಣ ಕಳ್ಳತನವಾಗಿರುವುದು ಬಂಗಾರಪೇಟೆ ತಾಲ್ಲೂಕು ಹಂಚಾಳ ಗೇಟ್ ಕೆನರಾ ಬ್ಯಾಂಕ್ ನಲ್ಲಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಗ್ಯಾಸ್ ಕಟ್ಟರ್ ಬಳಸಿಕೊಂಡು ಎಟಿಎಂನಲ್ಲಿದ್ದ ಹಣ ಕಳ್ಳತನ ಮಾಡಲಾಗಿದ್ದು, ಕೆನರಾ ಬ್ಯಾಂಕ್ ನಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ಕಳ್ಳತನವಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ರಮೇಶ್ ಹಾಗೂ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಕಂಡು ಬಂದಿದೆ.

Also Read  ದಿನ ಭವಿಷ್ಯ - ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

error: Content is protected !!
Scroll to Top