ಮನೆಯೊಳಗೆ ನುಗ್ಗಿದ ಮಳೆ ನೀರು ➤ ಘಟನಾ ಸ್ಥಳಕ್ಕೆ ಶಾಸಕ ಭೇಟಿ

(ನ್ಯೂಸ್ ಕಡಬ)newskadaba.com ಪುತ್ತೂರು, ಜು.24. ಕೋಡಿಂಬಾಡಿ ಗ್ರಾಮದ ಪರಬಪಾಲು ಎಂಬಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿ ಮನೆಯವರು ತೊಂದರೆಗೆ ಸಿಲುಕಿಸಿದ್ದು, ಘಟನಾ ಸ್ಥಳಕ್ಕೆ ಶಾಸಕ ಅಶೋಕ ರೈ ಬೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ವರದಿ ತಿಳಿಸಿದೆ.


ಲೀಲಾವತಿ ಎಂಬವರ ಮನೆಯ ಪಕ್ಕದ ಮನೆಯವರ ಆವರಣಗೋಡೆ ಕುಸಿದು ಬಿದ್ದ ಕಾರಣ ಮಳೆ ನೀರು ಲೀಲಾವತಿಯವರ ಮನೆಯೊಳಗೆ ಬಂದಿತ್ತು ಎನ್ನಲಾಗಿದೆ. ಮನೆಯವರು ತೊಂದರೆಗೆ ಸಿಲುಕಿರುವ ಮಾಹಿತಿ ಪಡೆದ ಶಾಸಕರು ತಕ್ಷಣವೇ ಸ್ಥಳಕ್ಕೆ ತಹಶೀಲ್ದಾರ್ ಬೇಟಿ ನೀಡಿ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.

Also Read  ಹೊಸ ಪಠ್ಯಪುಸ್ತಕದ ಪಾಠದಲ್ಲಿ ಬ್ರಾಹ್ಮಣರ ಅವಹೇಳನ ವಿವಾದ

error: Content is protected !!
Scroll to Top