ವೇಟ್ ಲಿಫ್ಟಿಂಗ್ ಮಾಡುತ್ತಲೇ ಪ್ರಾಣಬಿಟ್ಟ ಜನಪ್ರಿಯ ‘ಜಿಮ್ ಟ್ರೈನರ್’- ವಿಡಿಯೋ ವೈರಲ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.22. ಜಿಮ್ ಟ್ರೈನರ್, ವಿಶ್ವವಿಖ್ಯಾತ ಬಾಡಿ ಬಿಲ್ಡರ್ ಒಬ್ಬರು ವೇಟ್ ಲಿಫ್ಟಿಂಗ್ ಮಾಡುವಾಗ ಮೃತಪಟ್ಟ ಘಟನೆ ನಡೆದಿದೆ.

ಇಂಡೋನೇಷಿಯಾದ ಬಾಡಿಬಿಲ್ಡರ್ ಮತ್ತು ಅಂತರಾಷ್ಟ್ರೀಯವಾಗಿ ತಿಳಿದಿರುವ ಫಿಟ್ನೆಸ್ ಪ್ರಭಾವಿ ಜಸ್ಟಿನ್ ವಿಕ್ಕಿ ಜಿಮ್ ಮಾಡುವಾಗ ನಿಧನರಾಗಿದ್ದಾರೆ. 33 ವರ್ಷ ವಯಸ್ಸಿನ ಈ ತರಬೇತುಕಾರ, ಸುಮಾರು 400 ಪೌಂಡ್ (210 ಕೆಜಿ) ತೂಕವನ್ನ ಎತ್ತುವ ಪ್ರಕ್ರಿಯೆಯಲ್ಲಿ ಆತನ ತನ್ನ ಕುತ್ತಿಗೆ ಮುರಿದು ಮೃತಪಟ್ಟಿದ್ದಾರೆ. ಈ ಘಟನೆ ಜುಲೈ 15ರಂದು ನಡೆದಿದ್ದು, ಸಧ್ಯ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

Also Read   ಬಂಟ್ವಾಳ: ಯುವ ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ !! ➤  3 ಲಕ್ಷ ಪರಿಹಾರ ಕೊಡುವಂತೆ ಸೂಚನೆ..!

ಜಸ್ಟಿನ್ ವಿಕ್ಕಿ, ಕುತ್ತಿಗೆ ಮುರಿತದ ಜೊತೆಗೆ, ಹೃದಯ ಮತ್ತು ಯಕೃತ್ತಿನ ನರ ಹಾನಿಯಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಅತಿಯಾದ ಭಾರ ಎತ್ತುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸದಿರುವುದು ಅವರ ಸಾವಿಗೆ ಕಾರಣ ಎಂದು ತೀರ್ಮಾನಿಸಲಾಗಿದೆ. ಫಿಟ್ ನೆಸ್’ಗಾಗಿ ಎಲ್ಲರಿಗೂ ಸಲಹೆ ನೀಡುವ ತರಬೇತುದಾರರ ಸೂಚನೆಗಳನ್ನ ಪಾಲಿಸದಿರುವುದು ಈಗ ಎಲ್ಲರಲ್ಲೂ ಚರ್ಚೆಗೆ ಗ್ರಾಸವಾಗಿದೆ.

 

 

error: Content is protected !!
Scroll to Top