ಟೊಮ್ಯಾಟೊ ಕದ್ದ ಗೀತಾ ಸೀರಿಯಲ್ ನಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 22. ದೇಶಾದಾದ್ಯಂತ ಟೊಮ್ಯಾಟೊ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸಾಂಬಾರು, ಚಟ್ನಿ, ಗೊಜ್ಜು ಹೀಗೆ ಎಲ್ಲದಕ್ಕೂ ಬಳಕೆಯಾಗುವ ಟೊಮ್ಯಾಟೋ ಈಗ ದುಬಾರಿಯಾಗಿದ್ದು, ಚಿನ್ನದ ಬೆಲೆ ಇರುವ ಟೊಮ್ಯಾಟೊ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿಲ್ಲ. ಇದೀಗ ಕಲರ್ಸ್ ಕನ್ನಡದ ಪ್ರಸಿದ್ಧ ಧಾರಾವಾಹಿ ಗೀತಾ ನಟಿ ಶರ್ಮಿತಾ ಗೌಡ ಅವರು ಟೊಮ್ಯಾಟೊ ಕದ್ದು ಸುದ್ದಿಯಾಗಿದ್ದಾರೆ.

ಅವರು ಟೊಮ್ಯಾಟೊ ಕದಿಯೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಟ ಗಿರೀಶ್ ಶಂಕರ್ ಅವರು ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ಅವರು ಎರಡು ಟೊಮ್ಯಾಟೊ ಹಿಡಿದಿರುವುದನ್ನು ಕಾಣಬಹುದು. ಈ ಸಂದರ್ಭ ಶರ್ಮಿತಾ ಅವರು ಕಾವಾಲಯ್ಯ ಎಂದು ಡ್ಯಾನ್ಸ್ ಮಾಡುತ್ತಲೇ ಎರಡು ಟೊಮ್ಯಾಟೊ ಎಗರಿಸಿಬಿಡುತ್ತಾರೆ. ಹೌದು ಸೀರಿಯಲ್ ಕಲಾವಿದರ ಈ ಫನ್ನಿ ವಿಡಿಯೋ ಈಗ ವೈರಲ್ ಆಗಿದೆ.

Also Read  ಕಡಬ ಗಣೇಶೋತ್ಸವ ಸಮಿತಿಗೆ ಗಣಪತಿ ಪೀಠ ಸಮರ್ಪಣೆ

 

error: Content is protected !!
Scroll to Top