ಅವಧಿ ಮೀರಿದ ದಿನ ಬಳಕೆ ವಸ್ತುಗಳ ಮಾರಾಟ ➤ ಆರೋಪಿ ಅರೆಸ್ಟ್..!



(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.21. ಸಿಲಿಕಾನ್‌ ಸಿಟಿ ಬೆಂಗಳೂರಿನ ರಸ್ತೆಯಲ್ಲಿ ಅವಧಿ ಮೀರಿದ ದಿನ ಬಳಕೆಯ ವಸ್ತುಗಳ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.
ಸಿದ್ಧಿಕ್ ಅಹಮದ್ ಪಾಷಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಹೆಚ್ಚು ಹಣ ಮಾಡುವ ದುರುದ್ದೇಶದಿಂದ ವೇರ್‌ಹೌಸ್‌ನಿಂದ ವಸ್ತುಗಳನ್ನು ತಂದು ಸಿದ್ಧಿಕ್ ಮಾರಾಟ ಮಾಡುತ್ತಿದ್ದನು.






ಪೊಲೀಸರು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಆಹಾರ, ದಿನಸಿ, ಸೋಪ್, ತಂಪು ಪಾನೀಯ, ಬಿಸ್ಕೇಟ್, ಅಡುಗೆ ಎಣ್ಣೆ ಸೀಜ್ ಮಾಡಿದ್ದಾರೆ. ಒಟ್ಟು 50 ಲಕ್ಷ ಮೌಲ್ಯದ ಅವಧಿ ಮೀರಿದ ವಸ್ತುಗಳು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧನ ಮಾಡಲಾಗುತ್ತದೆ.






error: Content is protected !!
Scroll to Top