ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಅಮೆರಿಕ, ಜು.21. ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಯುನೈಟೆಡ್ ಸ್ಟೇಟ್ಸ್‌ನ ನೆವಾಡಾದಲ್ಲಿ ನಡೆದಿದೆ. ವುಡ್ರೋ ಟರ್ನರ್ ಬಂಡಿ ಮೃತ ಬಾಲಕ ಎಂದು ಗುರುತಿಸಲಾಗಿದೆ. ನೆವಾಡಾದಲ್ಲಿ ಎರಡು ವರ್ಷದ ಬಾಲಕ ಅಪರೂಪದ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.

ಬಾಲಕನ ಆರೋಗ್ಯದಲ್ಲಿ ಆಗಿರುವ ಏರುಪೇರು ಗಮನಕ್ಕೆ ಬಂದು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರಿಗೆ ರೋಗದ ಲಕ್ಷಣದ ಬಗ್ಗೆ ತಿಳಿದಿದೆ. ಎರಡು ವರ್ಷದ ಮಗುವಿಗೆ ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ್ದಾರೆ. ಏಕೆಂದರೆ, ಮಗು ಬದುಕುಳಿಯುವ ಹಂತವನ್ನು ಮೀರಿತ್ತು. ನಂತರ ಕೆಲವು ದಿನಗಳ ನಂತರ ಈ ಮಗು ಕೊನೆಯುಸಿರೆಳೆದಿದೆ.

Also Read  ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ➤ ಪಾದಚಾರಿ ಸ್ಥಳದಲ್ಲೇ ಮೃತ್ಯು

 

error: Content is protected !!
Scroll to Top