’ಪಾನ’ ಪ್ರಿಯರಿಗೆ ಬಿಗ್ ಶಾಕ್..! ಇಂದಿನಿಂದಲೇ ದುಬಾರಿಯಾಗಲಿರುವ ಮದ್ಯ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.21. ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದು, (ಜುಲೈ 21) ಇಂದಿನಿಂದಲೇ ಮದ್ಯದ ದರ ದುಬಾರಿಯಾಗಲಿದೆ.2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಏರಿಕೆ ಇಂದಿನಿಂದ ಜಾರಿಯಾಗಲಿದೆ ಎನ್ನಲಾಗಿದೆ.
ಶೇ.20ರಷ್ಟು ಹೆಚ್ಚಿನ ಹಿನ್ನೆಲೆಯಲ್ಲಿ ಗರಿಷ್ಟ ದರದೊ೦ದಿಗೆ ಹೊಸ ಬೆಲೆಯಲ್ಲಿ ಮದ್ಯ ಮಾರಾಟವಾಗಲಿದ್ದು, ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಂತೆ ಮದ್ಯದ ಅಧಿಕಾರಿ ಸುಂಕವನ್ನು ಹೆಚ್ಚಿಸಲಾಗಿದೆ.


ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿದಂತೆ ಎಲ್ಲಾ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇಕಡ 20ರಷ್ಟು ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡ 10ರಷ್ಟು ಹೆಚ್ಚಳ ಮಾಡಲಿದ್ದು, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡ 175 ರಿಂದ ಶೇಕಡ 185ರಷ್ಟು ಹೆಚ್ಚಳವಾಗಲಿದೆ. ಭಾರತೀಯ ಮದ್ಯ 60 ಎಂಎಲ್ ಒಂದು ಪೆಗ್ ಗೆ 10 ರಿಂದ 20 ರೂಪಾಯಿ ಹೆಚ್ಚಳ ಆಗಲಿದೆ. ಬಿಯರ್ ಬೆಲೆ ಪ್ರತಿ ಬಾಟಲ್ ಗೆ 10 % ಹೆಚ್ಚಳವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top