ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರ ಪ್ಲ್ಯಾನ್ ವಿಫಲ- ಕಮಿಷನರ್ ನಿಂದ ಸ್ಪೋಟಕ ಮಾಹಿತಿ ಬಹಿರಂಗ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ವಿಧ್ವಂಸಕ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದು, ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ಈ ಕುರಿತು ಬೆಂಗಳೂರು ಕಮಿಷನರ್ ದಯಾನಂದ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಸಿಬಿ ಪೊಲೀಸರು ಜುನೈದ್, ಸೊಹೈಲ್, ಉಮರ್, ಮುದಾಸಿರ್ ಹಾಗೂ ಜಾಹಿದ್ ಎಂಬ ಶಂಕಿತ ಉಗ್ರರನ್ನು ಇಂದು ಬಂಧಿಸಿದ್ದು, ಇವರ ಹಿಂದೆ ಉಗ್ರ ಸಂಘಟನೆಯ ಕೈವಾಡವಿರುವ ಶಂಕೆಯಿದೆ ಎಂದು ಹೇಳಿದ್ದಾರೆ.


ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಐವರು ಆರೋಪಿಗಳು 2017 ರ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು, ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು. ಅಲ್ಲಿ ಅವರು ಕೆಲವು ಭಯೋತ್ಪಾದಕರೊಂದಿಗೆ ಸಂಪರ್ಕಕ್ಕೆ ಬೆಳೆಸಿ, ಸ್ಫೋಟಕಗಳನ್ನು ನಿರ್ವಹಿಸುವ ಬಗ್ಗೆ ತರಬೇತಿ ಪಡೆದಿದ್ದರು ಎನ್ನಲಾಗಿದೆ. ಇವರಿಗೆ ವಿದೇಶದಿಂದ ಫಂಡಿಂಗ್ ಕೂಡಾ ಆಗಿದ್ದು, ಶಂಕಿತರು ಬೆಂಗಳೂರನ್ನೇ ಟಾರ್ಗೆಟ್ ಮಾಡಿದ್ದರು. ಉಗ್ರರ ಹಿಂದೆ ಯಾರಿದ್ದಾರೆ ಎಂಬುದು ಶೀಘ್ರವೇ ತನಿಖೆಯಾಗಲಿದೆ. ಉಗ್ರರ ಪ್ಲ್ಯಾನ್ ವಿಫಲಗೊಳಿಸಲಾಗಿದೆ. ಎಲ್ ಇಟಿ ಉಗ್ರ ನಜೀರ್ ಇವರಿಗೆ ತರಬೇತಿ ನೀಡಿದ್ದ ಎನ್ನಲಾಗಿದೆ. ಸದ್ಯ 7 ಪಿಸ್ತೂಲ್, ಸ್ಫೋಟಕ ವಸ್ತುಗಳು ಮತ್ತು ಅವರ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Also Read  ಮಂಗಳೂರು: ಉದ್ಯಮಿ ಮನೆ ಮೇಲೆ ಐಟಿ ದಾಳಿ ! ➤  ರೂ. 17 ಕೋಟಿ ಮೌಲ್ಯದ ಆಸ್ತಿ ವಶ        

error: Content is protected !!
Scroll to Top